ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ರಾಮತೀರ್ಥದಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು , ಹಂಸರಾಜ್ ಭಾರಧ್ವಾಜ್ ಅಲ್ಲ ಅವರು ಧ್ವಂಸರಾಜ್. ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ದೂರಿನ ಮೇರೆಗೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟರು. ಅವರು ವಿಕೃತ ಮನಸ್ಸಿನವರು ಎಂದು ಆರೋಪಿಸಿದ್ದಾರೆ.
ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿಕೃತ ಮನಸ್ಸಿನವರು. ಯಡಿಯೂರಪ್ಪನವರ ವಿರುದ್ಧ ದುರುದ್ದೇಶದಿಂದ ಕೇಸ್ ಹಾಕಿಸಿದ್ದರು. ಯಡಿಯೂರಪ್ಪ ಜೈಲಿಗೆ ಹೋಗುವಂತೆ ಮಾಡಿದರು. ಯಡಿಯೂರಪ್ಪ ಅವರು ಭ್ರಷ್ಟಾಚಾರ ಮಾಡಿಲ್ಲ. ರಾಜಕೀಯ ಷಡ್ಯಂತ್ರದಿಂದ ಬಿ.ಎಸ್.ವೈ. ಜೈಲಿಗೆ ಹೋಗಬೇಕಾಯಿತು. ಅವರು ಜೈಲಿಗೆ ಹೋದಾಗ ಬಿಜೆಪಿಯವರು ಗಲಾಟೆ ಮಾಡಲಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.