ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. ಕೆಲವು ದಿನಗಳ ಕಾಲ ಅವರ ವಿಚಾರಣೆಯನ್ನು ನಡೆಸಿದ ನಂತರ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿ ಇದೀಗ ಬಂಧನಕ್ಕೆ ಒಳಪಡಿಸಲಾಗಿದೆ. ಇನ್ನು ಇಷ್ಟಕ್ಕೆ ಸುಮ್ಮನಾಗದ ಇಡಿ ಅಧಿಕಾರಿಗಳು ಡಿಕೆಶಿ ಅವರ ಆಪ್ತರು ಮತ್ತು ಅವರ ಕುಟುಂಬಸ್ಥರ ವಿಚಾರಣೆಗೆ ಮುಂದಾಗಿದ್ದು ಡಿಕೆಶಿ ಅವರ ಪುತ್ರಿ ಐಶ್ವರ್ಯ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಿದ್ದಾರೆ.
ಹೀಗೆ ಡಿಕೆಶಿ ಅವರ ಪುತ್ರಿ ಐಶ್ವರ್ಯ ಅವರ ವಿಚಾರಣೆಗೆ ಮುಂದಾದ ಇಡಿ ಅಧಿಕಾರಿಗಳಿಂದ ಐಶ್ವರ್ಯ ಅವರ ಆಸ್ತಿ ಮೊತ್ತ ಇದೀಗ ಬಹಿರಂಗವಾಗಿದೆ. ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ನ ಟ್ರಸ್ಟಿ ಯಲ್ಲಿ ಐಶ್ವರ್ಯ ಅವರ ಹೂಡಿಕೆ ಇದೆ. ಮುಂಬೈನಲ್ಲಿ 1.2 ಕೋಟಿ ರೂಪಾಯಿ ಐಶಾರಾಮಿ ಫ್ಲ್ಯಾಟ್ ಐಶ್ವರ್ಯ ಅವರ ಹೆಸರಿನಲ್ಲಿದೆ. ಸೋಲ್ ಸ್ಪೇಸ್ ಪ್ರಾಜೆಕ್ಟ್ ಲಿಮಿಟೆಡ್ ಅವರಿಗೆ 76.11 ರೂಪಾಯಿ ಸಾಲವನ್ನು ಕೊಟ್ಟಿದ್ದಾರೆ. ಹೀಗೆ ಒಟ್ಟು ಐಶ್ವರ್ಯ ಅವರ ಹೆಸರಿನಲ್ಲಿ ಇರುವ ಆಸ್ತಿಯ ಮೊತ್ತ 108 ಕೋಟಿ ರೂಪಾಯಿ ಎಂದು ತಿಳಿದು ಬಂದಿದ್ದು ಸಂಪೂರ್ಣ ವಿಚಾರಣೆಯ ಬಳಿಕ ಒಟ್ಟು ಆಸ್ತಿ ಮೊತ್ತ ಎಷ್ಟಿದೆ ಎಂಬುದು ಖಚಿತವಾಗಿ ತಿಳಿದು ಬರಲಿದೆ.