ಗೂಗಲ್‌ಪೇ ಕಸ್ಟಮರ್ ಕೇರ್‌ ಎಂದು 96 ಸಾವಿರ ವಂಚನೆ!

0
258

ಆನ್ ಲೈನ್ ನಲ್ಲಿ‌ಎಷ್ಟೇ ಬುದ್ದಿವಂತರಿದ್ದರೆ ವಂಚಕರು ಹೇಗಾದರೂ ಮಾಡಿ ದೋಚುವ ಪ್ರಕರಣಗಳು ದಿನೇ ದಿನೇ‌ ಹೆಚ್ಚಾಗುತ್ತಿವೆ.

ಮುಂಬೈ ಮೂಲದ 31 ವರ್ಷದ ವ್ಯಕ್ತಿಯೊಬ್ಬರಿಗೆ ವಂಚಕನೊಬ್ಬ ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ ಎಂದು ಪೋಸ್ ನೀಡಿ 96 ಸಾವಿರ ರೂ. ಹಣವನ್ನು ವಂಚಿಸಿದ್ದಾನೆ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದು ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೊಬ್ಬರು ಗೂಗಲ್ ಪೇ ಮೂಲಕ 96 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸಲು ಮುಂದಾಗಿದ್ದರು. ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಸಮಸ್ಯೆ ಕಾಣಿಸಿದೆ. ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಅವರು ಇಂಟರ್ ನೆಟ್ ನಲ್ಲಿ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದ್ದಾರೆ. ಈ ವೇಳೆ ಒಂದು ನಂಬರ್ ಕಾಣಿಸಿದೆ.

ಕಾಣಿಸಿದ ನಂಬರಿಗೆ ಕರೆ ಮಾಡಿದಾಗ ಆ ವ್ಯಕ್ತಿ “ನಾನು ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ” ಎಂದು ಪೋಸ್ ನೀಡಿ, “ಹಣವನ್ನು ವರ್ಗಾವಣೆ ಮಾಡುವ ಈ ರೀತಿಯ ಸಮಸ್ಯೆಯಾಗುವುದು ಸಾಮಾನ್ಯ. ಈ ಹಿಂದೆ ಹಲವು ಮಂದಿಗೆ ಈ ರೀತಿಯ ಸಮಸ್ಯೆಯಾದಾಗ ನಾನೇ ಕೆಲ ನಿಮಿಷದಲ್ಲಿ ಸರಿ ಮಾಡಿಕೊಟ್ಟಿದ್ದೇನೆ. ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇನೆ” ಎಂದು ಹೇಳಿದ್ದಾನೆ.

ಇದಾದ ಬಳಿಕ ವಂಚಕ,”ನಾನೊಂದು ಲಿಂಕ್ ಕಳುಹಿಸುತ್ತೇನೆ. ಆ ಲಿಂಕ್ ಕ್ಲಿಕ್ ಮಾಡಿ” ಎಂದು ಸೂಚಿಸಿದ್ದಾನೆ. ಈತನ ಮಾತಿನ ಮೇಲೆ ನಂಬಿಕೆ ಇಟ್ಟು ವ್ಯಕ್ತಿ ಲಿಂಕ್ ಕ್ಲಿಕ್ ಮಾಡಿದಾಗ ಅವರ ಖಾತೆಯಿಂದ 96 ಸಾವಿರ ರೂ. ಹಣ ವಂಚಕನ ಖಾತೆಗೆ ಹೋಗಿದೆ. ಹಣ ವರ್ಗಾವಣೆಯದ ನಂತರ ತಾನು ವಂಚನೆ ಒಳಗಾದ ವಿಚಾರ ವ್ಯಕ್ತಿಗೆ ಗೊತ್ತಾಗಿದೆ.

ನಂತರ ಸಂತ್ರಸ್ತ ವ್ಯಕ್ತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಾಗಿದೆ, ನೆನಪಿರಲಿ‌ ಗೂಗಲ್‌ಪೇ‌ ಗೆ ಕಸ್ಟಮೇರ್‌ ನಂಬರ್ ಇಲ್ಲ, ಆಪ್ ನಲ್ಲಿಯೇ ಕಸ್ಟಮರ್ ಕೇರ್ ಜೊತೆ ಚ್ಯಾಟ್ ಮಾಡಲು ಅವಕಾಶ ಇದೆ.

LEAVE A REPLY

Please enter your comment!
Please enter your name here