ರೇವಣ್ಣ ಅವರು ರಾಜಕೀಯ ನನಗೆ ಹೊಸದೇನಲ್ಲಾ ಯಡಿಯೂರಪ್ಪ ಅಂತಹವರಿಗೆ ಹೆದರಿ ರಾಜಕೀಯ ಬಿಟ್ಟು ಓಡಿ ಹೋಗೊಲ್ಲ .. ಇಂತಹ ಯಡಿಯೂರಪ್ಪರನ್ನು ಎಷ್ಟು ಮಂದಿಯನ್ನು ನೋಡೊದ್ದಿನಿ ಎಂದು ಕಾರವಾಗಿ ಮಾತನಾಡಿದ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಲವು ಹುದ್ದೆ ಅಲಂಕರಿಸಿದ್ದಾರೆ ಹಾಗೂ ನಾನಾ ತನಿಖೆಗೆ ಒಳಪಟ್ಟರು ಒಂದು ಕಪ್ಪು ಚುಕ್ಕಿ ಅವರ ಮೇಲೆ ಇಲ್ಲಾ ನನ್ನ ಮೇಲು ಸಹ ಯಾವುದೇ ತನಿಖೆ ನಡೆಸಲು ನಾನು ಹೆದರಿ ಓಡಿ ಹೋಗುವವನಲ್ಲ ಎಂದರು. ಯಡಿಯೂರಪ್ಪ ಅವರು ದ್ವೇಷದ ಆಡಳಿತ ನಡೆಸುತ್ತಿದ್ದು ಎಷ್ಟು ದಿನ ಮಾಡುತ್ತಾರೆ ಮಾಡಲಿ.. ಯಡಿಯೂರಪ್ಪ ಅವರನ್ನು ರಿಪೇರಿ ಹೇಗೆ ಮಾಡೋದು ನನಗೆ ಗೊತ್ತಿದೆ ಎಂದರು.
ನಾನು ಅಧಿಕಾರದಲ್ಲಿದ್ದ 15 ತಿಂಗಳಲ್ಲಿ ಹಾಸನ ಜಿಲ್ಲೆಗೆ ಬೇಕಾದ ಎಲ್ಲಾ ಕೆಲಸವನ್ನು ಹಾಗೂ ಮುಂದೆಯಾಗಬೇಕಾದ ಕಾಮಗಾರಿಗೆ ಏನು ಕೆತ್ತಬೇಕು ಅದನ್ನೆಲ್ಲಾ ಕೆತ್ತಿದ್ದೇನೆ ಎಂದು ಮಾರ್ಮಿಕವಾಗಿಯೇ ನುಡಿದ ರೇವಣ್ಣ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಿಯೇ ಇಲ್ಲಾ ಎಂದರು.