ಬಿಜೆಪಿಯವರಿಗೂ ಸದ್ಯಕ್ಕೆ ಬೇರೆ ಶಾಸಕರ ಅಗತ್ಯವಿಲ್ಲ. ಅವರಲ್ಲೇ ಸಚಿವ ಸ್ಥಾನಕ್ಕೆ ಪೈಪೋಟಿ ಇದೆ ಎಂದರು. ಮುಖ್ಯಮಂತ್ರಿಯಾಗಿದ್ದಾಗ ಜಗದೀಶ್ ಶೆಟ್ಟರ್ ಅವರು, ಮಂತ್ರಿಯಾಗಿರುವುದು ಸರಿಯಲ್ಲ. ಅವರು ಪಕ್ಷದ ಅಧ್ಯಕ್ಷರಾಗಬೇಕಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಹದಿಂದ ನಷ್ಟವಾದ ಜನರ ಆಸ್ತಿ ಪಾಸ್ತಿ ಹಾನಿಗೆ ಸರಿಯಾದ ಪರಿಹಾರ ಕೂಡ ರಾಜ್ಯ ಸರ್ಕಾರ ನೀಡಿಲ್ಲ ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಲು ಸಹಕಾರ ನೀಡಿದ್ದಕ್ಕೆ ಮಹಾರಾಷ್ಟ್ರದ ಸಿಎಂಗೆ ಅಭಿನಂದನೆ ಸಲ್ಲಿಸಲು ಮುಖ್ಯಮಂತ್ರಿ ಹೋಗಿದ್ದರು ಎಂದು ಆರೋಪಿಸಿದರು.