ಕ್ಯಾಶ್ ಯಾಕೆ ಎ ಟಿ ಎಂ ಇದೆಯಲ್ಲ ಅಂತ ಹೇಳ್ತಿದ್ದವರಿಗೆಲ್ಲ ಶಾಕ್ ಕಾದಿದೆ. ಎ ಟಿ ಎಂ ಅಂದ್ರೆ ಎನಿ ಟೈಂ ಮನಿ ಅನ್ನೋದು ಇನ್ನು ಮುಂದೆ ಸುಳ್ಳಾಗಲಿದೆ.ರಾತ್ರಿ ತಡವಾಗಿ ಎ ಟಿ ಎಂ ನಲ್ಲಿ ಹಣ ಪಡೆಯಲು ಇನ್ನು ಮುಂದೆ ಬ್ಯಾಂಕ್ ಗಳು ಸಹಕರಿಸುವುದಿಲ್ಲ. ಏಕೆಂದರೆ ಎ ಟಿ ಎಂ ಗಳಿಗೆ ನಗದು ಪುನರ್ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳಿಗೆ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಒಂದೊಮ್ಮೆ ಈ ನಿಯಮ ಜಾರಿಗೆ ಬಂದದ್ದೇ ಆದಲ್ಲಿ ರೆಡಿ ಕ್ಯಾಶ್ ಇಟ್ಟುಕೊಳ್ಳದೆ ಎ ಟಿ ಎಂ ಅನ್ನ ಅವಲಂಬಿಸಿರೋ ಸಹಸ್ರಾರು ಮಂದಿಗೆ ನಿರಾಸೆಯಾಗೋದಂತೂ ಗ್ಯಾರಂಟಿ. ರಾತ್ರಿ 8 ರ ಬಳಿಕ ಎ ಟಿ ಎಂ ಗಳನ್ನ ಪುನರ್ ಭರ್ತಿ ಮಾಡಬಾರದು ಎಂಬ ಪ್ರಸ್ತಾಪವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.
ಅಲ್ಲದೆ ಹಣ ಸಾಗಿಸೋ ವ್ಯಾನ್ ನಲ್ಲಿ ಸಿಸಿಟಿವಿ ಮತ್ತು ಜಿಪಿಎಸ್ ಅಳವಡಿಕೆಯಾಗಿರಬೇಕು. ಒಂದು ಟ್ರಿಪ್ ನಲ್ಲಿ ಗರಿಷ್ಠ 5 ಕೋಟಿ ಅನ್ನಷ್ಟೇ ಕೊಂಡೊಯ್ಯಬಹುದು. ಯಾವುದೇ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸುವಂತ ಇಬ್ಬರು ಸಶಸ್ತ್ರ ಗಾರ್ಡ್ ಗಳಿರಬೇಕು ಇತ್ಯಾದಿ ನಿಯಮಗಳನ್ನ ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಸುರಕ್ಷತಾ ದೃಷ್ಠಿಯಿಂದ ಈ ಯೋಜನೆ ಸ್ವಾಗತಿಸುವಂತದ್ದೇ. ಒಂದೊಮ್ಮೆ ಈ ಯೋಜನೆ ಜಾರಿಗೆ ಬಂದರೆ ಸದಾ ಜೇಬಲ್ಲಿ ಎ ಟಿ ಎಂ ಇಟ್ಟುಕೊಂಡು ಓಡಾಡುತ್ತಿದ್ದ ಜನ ಅವಶ್ಯಕತೆಗೆ ತಕ್ಕಂತೆ ಹಣ ಇಟ್ಟುಕೊಳ್ಳಬೇಕಾಗತ್ತೆ. ಆದರೆ ಎ ಟಿ ಎಂ ಸಂಸ್ಕೃತಿಗೆ ಹೊಂದಿಕೊಂಡಿರೋ ಜನಕ್ಕೆ ಈ ಯೋಜನೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.
- ಶ್ರೀ
POPULAR STORIES :
ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video
ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
ಪ್ರಿಯಾಂಕ ಛೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ..?
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?
`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!