No menu items!
12.4 C
Munich
Wednesday, April 29, 2026

ಪ್ರಿಯಾಂಕ ಛೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ..? ಸುಂದರಿಯರ ಸಾವಿನ ಹಿಂದೆ `ಬಾಯ್ ಫ್ರೆಂಡ್'ಗಳು..!?

Must read

ಜಿಯಾ ಖಾನ್, ಪ್ರತ್ಯೂಷ, ನಫೀಸಾ ಜೋಸೇಫ್ ಒಬ್ಬರಲ್ಲ ಇಬ್ಬರಲ್ಲ. ದುರಂತ ಸಾವನ್ನಪ್ಪಿರುವ ನಟಿಮಣಿಯರೆಲ್ಲರ ಸಾವಿನ ಹಿಂದೆ ಅವರ ಬಾಯ್ ಫ್ರೆಂಡ್ ಗಳ ನೆರಳು ಸರಿದಾಡುತ್ತದೆ. ಬಾಯ್ಫ್ರೆಂಡ್ಗಳ ಜೊತೆ ಮುನಿಸು, ನಂಬಿಕೆ ದ್ರೋಹ, ಸೆಕ್ಸ್ ಆತುರ, ಮೋಸ- ಎಲ್ಲವೂ ಸೇರಿ ಬದುಕಿನ ಉತ್ತುಂಗದಲ್ಲಿದ್ದ ಸಮಯದಲ್ಲಿ ಅನಾಮತ್ತಾಗಿ ಸಾವಿಗೆ ಶರಣಾಗಿಬಿಡುತ್ತಾರೆ. ಅಂತಹವರ ಸಾಲಿನಲ್ಲಿ ಪ್ರಿಯಾಂಕ ಚೋಪ್ರಾ ಕೂಡ ಇದ್ದರು ಎಂಬ ಬೆಚ್ಚಿಬೀಳಿಸುವ ಮಾಹಿತಿಯನ್ನು, ಅವರ ಎಕ್ಸ್ ಮ್ಯಾನೇಜರ್ ಪ್ರಕಾಶ್ ಜಾಜು ಹೊರಗೆಡವಿದ್ದಾರೆ.

ಮೊನ್ನೆಯಷ್ಟೆ, ಗೆಳೆಯ ರಾಹುಲ್ ರಾಜ್ ಸಿಂಗ್ ಬೇರೊಬ್ಬಳ ಜೊತೆ ಸಲುಗೆಯಿಂದಿದ್ದಾನೆ ಎಂಬ ಕಾರಣಕ್ಕೆ ಅವನ ಜೊತೆ ಜಗಳವಾಡಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದ ಪ್ರತ್ಯೂಷ ಬ್ಯಾನರ್ಜಿ ಪ್ರಕರಣದ ಬೆನ್ನಿಗೆ, ಪ್ರಿಯಾಂಕ ಛೋಪ್ರಾಳ ಸೂಸೈಡ್ ಅಟೆಂಪ್ಟ್ ರಹಸ್ಯವನ್ನು ಪ್ರಕಾಶ್ ಜಾಜು ಬಹಿರಂಗಪಡಿಸಿದ್ದರು. ಮಾನಸಿಕವಾಗಿ ಸದೃಢರಾಗಿರುವ ಪ್ರಿಯಾಂಕ ಚೋಪ್ರಾ ಒಂದು ಹಂತದಲ್ಲಿ ಸ್ಥಿಮಿತ ಕಳೆದುಕೊಂಡಿದ್ದರು. ತನ್ನ ಬಾಯ್ ಫ್ರೆಂಡ್ ಅಸಿಮ್ ಮರ್ಚಂಟ್ ವಿಚಾರವಾಗಿ ಎರಡ್ಮೂರು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಅದೃಷ್ಟವಶಾತ್ ಆ ಕ್ಷಣಕ್ಕೆ ಅವರಿಗೆ ಸಿಕ್ಕ ನೈತಿಕ ಬೆಂಬಲದಿಂದಾಗಿ ಅವರೀಗ ಬದುಕುಳಿದಿದ್ದಾರೆ ಎಂದಿದ್ದು ಪ್ರಕಾಶ್ ಜಾಜು.

ಅಂದಚಂದದ ಸೆಲೆಬ್ರಿಟಿಗಳು ಜನಪ್ರಿಯರಾಗಿ, ಯಶಸ್ಸಿನ ಉತ್ತುಂಗದಲ್ಲಿ ಆರಾಮಾಗಿ ವಿಹರಿಸುತ್ತಿರುತ್ತಾರೆ ಎಂದುಕೊಂಡವರಿಗೆ ಅವರ ವೈಯುಕ್ತಿಕ ಬದುಕಿನ ನೋವುಗಳ ಅರಿವಿರುವುದಿಲ್ಲ. ದುರಂತ ಸಾವನ್ನು ತಂದುಕೊಂಡ ಅನೇಕ ನಟಿಮಣಿಯರ, ಸೆಲೆಬ್ರಿಟಿಗಳ ಸಾವಿನ ಹಿಂದೆ ಅವರ ಬಾಯ್ ಫ್ರೆಂ ಡ್’ಗಳ ನೆರಳಿರುವುದು ಮಾತ್ರ ಅತ್ಯಂತ ಸ್ಪಷ್ಟ..!

  • ರಾ ಚಿಂತನ್.

POPULAR  STORIES :

ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video

ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

ನಾ ಮಾಡಿದ್ದು ಸಣ್ಣಪುಟ್ಟ ತಪ್ಪುಗಳನ್ನಷ್ಟೆ..!? ನನ್ನವಳ ಪತ್ರದಲ್ಲಿ ನಿಮ್ಮೆಲ್ಲರ ಛಾಯೆ..

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?

`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article