ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ `ಬೆಂಕಿ'ಯ ಆಟ..!

Date:

raaaಜಮ್ಮು-ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ಬೆನ್ನಲ್ಲೇ ಪಿಡಿಪಿ- ಬಿಜೆಪಿ ಮೈತ್ರಿಕೂಟದಲ್ಲಿ ಬಿರುಕು ಮೂಡುವ ಲಕ್ಷಣಗಳಿತ್ತು. ಬಿಜೆಪಿ ಜತೆಗೂಡಿ ಹೊಸದಾಗಿ ಸರ್ಕಾರ ರಚಿಸಬೇಕೆಂದಾದರೆ ತಮ್ಮ ನಾಲ್ಕು ಷರತ್ತುಗಳಿಗೆ ಆ ಪಕ್ಷ ಒಪ್ಪಿಗೆ ನೀಡಬೇಕು ಎಂದು ಸಯ್ಯದ್ ಮುಫ್ತಿ ಪುತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಮೂರು ಷರತ್ತುಗಳನ್ನು ಪಿಡಿಪಿಗೆ ವಿಧಿಸಿತ್ತು. ಕಾಶ್ಮೀರ ಕಣಿವೆಯಲ್ಲಿ ರಾಜಕೀಯ ಲೆಕ್ಕಾಚಾರಗಳ ಕಾರುಬಾರು ಶುರುವಾಗಿದ್ದ ಬೆನ್ನಿಗೆ ಇದೀಗ ಫೈರ್ಬ್ರಾಂಡ್ ಮೆಹಬೂಬ ಮುಫ್ತಿ ಜಮ್ಮು ಕಾಶ್ಮೀರದ ಪ್ರಥಮ ಮುಖ್ಯಮಂತ್ರಿಯಾಗಿ ಗದ್ದುಗೆಯೇರಿದ್ದಾರೆ.

ಕಳೆದ ಮಾರ್ಚ್ ನಲ್ಲಿ ಪಿಡಿಪಿ-ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಮಾತ್ರವಲ್ಲ, ಪಿಡಿಪಿ ಬಹುಮತ ಪಡೆದಿದ್ದೇ ಬದಲಾವಣೆ ಎನ್ನಲಾಗಿತ್ತು. ಸರ್ಕಾರ ರಚಿಸುವಾಗಲೂ ಷರತ್ತುಗಳನ್ನು ಹಾಕಲಾಗಿತ್ತು. ಆನಂತರದಲ್ಲಿ ಮಸ್ರತ್ ಅಲಂನಂತವರ ವಿಚಾರದಲ್ಲಿ ತೆಗೆದುಕೊಂಡ ನಿಲುವುಗಳು ಮೈತ್ರಿಕೂಟದ ಭಾಗವಾಗಿದ್ದ ಬಿಜೆಪಿಯ ಪ್ರಸ್ತುತತೆಯನ್ನು ಪ್ರಶ್ನಿಸುವಂತಿತ್ತು. ಅಧಿಕಾರ ಸ್ವೀಕರಿಸಿದ ದಿನದಿಂದಲೂ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿದ್ದ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಅವರ ನಡವಳಿಕೆಯಿಂದ ಬಿಜೆಪಿ ಮುಜುಗರಕ್ಕೆ ಸಿಲುಕಿತ್ತು. ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಗೆ ಬೆಂಬಲ ಕೊಟ್ಟು ಸರ್ಕಾರ ರಚನೆ ಮಾಡಿಕೊಂಡ ತಪ್ಪಿನಿಂದಾಗಿ ಬಿಜೆಪಿ ನಾಯಕರು ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು. ಸಂಘ ಪರಿವಾರದ ನಾಯಕರು, ಮೈತ್ರಿ ಮರು ಪರಿಶೀಲನೆ ನಡೆಸುವಂತೆ ಬಿಜೆಪಿ ವರಿಷ್ಠರಿಗೆ ಸೂಚಿಸಿದ್ದರು. ಮುಸ್ಲಿಂ ಲೀಗ್ನ ಪ್ರತ್ಯೇಕತಾವಾದಿ ನಾಯಕ ಮಸರತ್ ಅಲಂಭಟ್ ನನ್ನು ಜೈಲಿನಿಂದ ಬಿಡುಗಡೆ ಮಾಡಲು ಮುಫ್ತಿ ಮಹಮ್ಮದ್ ಸಯೀದ್ ತೆಗೆದುಕೊಂಡ ಕ್ರಮ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದ್ದು ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ ಎಳೇ ದಿನಕ್ಕೆ ಬಿರುಕು ಮೂಡುವ ಲಕ್ಷಣ ಗೋಚರಿಸಿತ್ತು.

ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ನ ಮುಂಚೂಣಿ ನಾಯಕನಾಗಿದ್ದ ಮಸರತ್ ಆಲಂಭಟ್ ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ಗಲಭೆ ಮತ್ತು ಕೊಲೆ ಪ್ರಕರಣಗಳ ಪ್ರಮುಖ ರೂವಾರಿಯಾಗಿದ್ದ. 2010ರಲ್ಲಿ ಕಣಿವೆ ರಾಜ್ಯಾದ್ಯಂತ ನಡೆದ ಗಲಭೆ, ಭದ್ರತಾ ಪಡೆ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ಈತನೇ ಮಾಸ್ಟರ್ ಮೈಂಡ್. 112 ಯುವಕರು ಹಾಗೂ ಭದ್ರತಾ ಪಡೆಗಳ ಹತ್ಯೆ ಮಾಡಿದ ಆರೋಪ ಸಹ ಈತನ ಮೇಲಿದೆ. ಇಷ್ಟೆಲ್ಲ ದೇಶ ವಿದ್ರೋಹ ಆಪಾದನೆ ಹೊಂದಿರುವ ವ್ಯಕ್ತಿಯ ಬಿಡುಗಡೆಗೆ ಮುಖ್ಯಮಂತ್ರಿ ಮುತುವರ್ಜಿವಹಿಸಿದ್ದು ಬಿಜೆಪಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಹೀಗಾಗಿಯೇ ಮೈತ್ರಿ ದೊಸ್ತಿ ಕಳಚಿದರು ಚಿಂತೆಯಿಲ್ಲ. ದೇಶ ಹಾಗೂ ಭದ್ರತೆ ವಿಷಯದಲ್ಲಿ ಎಂದಿಗೂ ರಾಜಿಯಾಗಬಾರದು. ಅದರಲ್ಲೂ ರಾಷ್ಟ್ರದ್ರೋಹಿಯಾಗಿರುವ ಮಸರತ್ ಅಲಂಭಟ್ ಪರ ಮುಖ್ಯಮಂತ್ರಿ ವಕಾಲತು ವಹಿಸಿರುವುದು ಅತ್ಯಂತ ದುರಾದೃಷ್ಟಕರ. ಈ ಘಟನೆ ಬಳಿಕ ತೀವ್ರ ಇರಿಸು-ಮುರಿಸು ಅನುಭವಿಸಿದ್ದ ಬಿಜೆಪಿ, ಇದಕ್ಕಾಗಿಯೇ ಮುಫ್ತಿ ಮಹಮ್ಮದ್ ಸಯೀದ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿತ್ತು. ಈ ಹಂತದಲ್ಲೇ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ವಿಧಿವಶರಾಗಿದ್ದರು.

ಮುಫ್ತಿ ಮೊಹಮ್ಮದ್ ಸಯ್ಯದ್ ಅನಿರೀಕ್ಷಿತ ಸಾವಿನ ನಂತರ ಅವರ ಪುತ್ರಿ ಮುಫ್ತಿ ಮೆಹಬೂಬ ಅವರನ್ನು ಸಿಎಂ ಅಭ್ಯರ್ಥಿಯಾಗಿ ಪಿಡಿಪಿ ಅವಿರೋಧವಾಗಿ ಆಯ್ಕೆ ಮಾಡಿತ್ತು. ಈ ಹಂತದಲ್ಲೇ ಪಿಡಿಪಿಗೆ ಬಿಜೆಪಿ ಜೊತೆ ಸಖ್ಯ ಮುಂದುವರಿಸಬೇಕಾ..? ಬೇಡ್ವಾ..? ಎಂಬ ಗೊಂದಲಗಳು ಶುರುವಾಗಿತ್ತು. ಅದಕ್ಕೆ ತಕ್ಕಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೆಹಬೂಬ ಅವರನ್ನು ಭೇಟಿಯಾಗಿ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಆದರೆ ಅವರು ಸಂತಾಪ ಸೂಚಿಸುವ ಸಲುವಾಗಿ ಮೆಹಬೂಬ ಮುಫ್ತಿ ನಿವಾಸಕ್ಕೆ ತೆರಳಿದ್ದೆ ಎಂದರು. ಆದರೆ 2002ರಿಂದ 2008ರವರೆಗೆ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು ಎಂಬುದು ಗಮನಾರ್ಹ ಅಂಶವಾಗಿತ್ತು.

ಹಲವು ಷರತ್ತಿನ ಆಧಾರದಲ್ಲೇ ಮೈತ್ರಿಕೂಟ ಸರ್ಕಾರ ರಚಿಸಿದ್ದ ಬಿಜೆಪಿಗೆ, ಪಿಡಿಪಿ ಜೊತೆ ಮೈತ್ರಿ ಮುಂದುವರಿಸುವ ಬಗ್ಗೆ ಅರೆಮನಸ್ಸಿತ್ತು. ಹೀಗಿರುವಾಗ ಕ್ಷಿಪ್ರ ರಾಜಕೀಯ ವ್ಯತ್ಯಾಸಗಳು ಯಾವುದೇ ರೀತಿಯ ಬದಲಾವಣೆಗೂ ಕಾರಣವಾಗುವ ಸೂಚನೆಗಳಿದ್ದವು. ಮೈತ್ರಿಯೇ ಕಡಿದುಬೀಳುವ ಸಾಧ್ಯತೆಯೂ ಇತ್ತು. ಆದರೆ ಆಂತರ್ಯದ ಹಕೀಕತ್ತುಗಳನ್ನು ಪ್ರದರ್ಶಿಸದ ಬಿಜೆಪಿ ಮೈತ್ರಿ ಮುಂದುವರಿಯುತ್ತದೆ ಎಂದೇ ಹೇಳಿತ್ತು. ಇದೀಗ ಮೈತ್ರಿ ಮುಂದುವರಿದಿದೆ. ಮೆಹಬೂಬ ಮುಫ್ತಿ ಜಮ್ಮ ಕಾಶ್ಮೀರದ ಪ್ರಥಮ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಕಳೆದ ಮಾರ್ಚ್ ನಲ್ಲಿ ಪಿಡಿಪಿ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿತ್ತು. ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿದ್ದ ಈ ಎರಡೂ ಪಕ್ಷಗಳು ಕೈಜೋಡಿಸಿದ್ದು ಹಲವು ಅಚ್ಚರಿಗೆ ಕಾರಣವಾಗಿತ್ತು. ಆದರೆ ಮುಫ್ತಿ ಇರುವವರೆಗೆ ಎಲ್ಲವೂ ಸರಿ ಇತ್ತು. ಮುಫ್ತಿ ಮರಣ ನಂತರ ಫೈರ್ ಬ್ರಾಂಡ್ ಎಂದೇ ಕರೆಯಲಾಗುವ ಅವರ ಸುಪುತ್ರಿ ಮೆಹಬೂಬಾ ಮುಫ್ತಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದ ಪಿಡಿಪಿ ತನ್ನ ಉದ್ದೇಶವನ್ನು ಈಡೇರಿಸಿಕೊಂಡಿದೆ. ಅಷ್ಟಕ್ಕೂ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹ ಅನೇಕ ಷರತ್ತುಗಳ ಸಮರ ನಡೆದಿತ್ತು.. ಪಿಡಿಪಿ ಷರತ್ತಿನ ಪ್ರಕಾರ ಮುಫ್ತಿ ಸಯ್ಯದ್ ಅವಧಿಯಲ್ಲಿದ್ದಂತೆ ಬಿಜೆಪಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಆಗದು. ಮಹತ್ವದ ಖಾತೆಗಳನ್ನು ನಾವೇ ಇಟ್ಟುಕೊಳ್ಳುತ್ತೇವೆ. ಸೂಕ್ಷ್ಮ ವಿಚಾರಗಳ ಬಗ್ಗೆ ಬಿಜೆಪಿ ನಾಯಕರು ಹೇಳಿಕೆ ನೀಡಬಾರದು ಹಾಗೂ ಕೇಂದ್ರದಿಂದ ಹೆಚ್ಚಿನ ಅನುದಾನ ಕೊಡಿಸಬೇಕು ಎಂಬ ನಾಲ್ಕು ಷರತ್ತುಗಳನ್ನು ಮೆಹಬೂಬಾ ಮುಫ್ತಿ ಬಿಜೆಪಿಯ ಮುಂದಿಟ್ಟಿದ್ದರು. ಹಾಗೆಯೇ ಬಿಜೆಪಿ, `ಮುಫ್ತಿ ಸಯೀದ್ ಅವರು ಆರು ವರ್ಷಗಳ ಕಾಲ ಸಿಎಂ ಆಗಲು ಒಪ್ಪಿಗೆ ನೀಡಲಾಗಿತ್ತು. ಅವರು ನಿಧನವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಇಂತಿಷ್ಟು ಅವಧಿಗೆ ಎರಡೂ ಪಕ್ಷಗಳು ಹಂಚಿಕೊಳ್ಳಬೇಕು. ಜತೆಗೆ ಬಿಜೆಪಿಗೆ ಮಹತ್ವದ ಖಾತೆಗಳನ್ನು ಮತ್ತು ಜಮ್ಮು ಭಾಗಕ್ಕೆ ಹೆಚ್ಚು ಪ್ರಾತಿನಿಧ್ಯವನ್ನು ನೀಡಬೇಕು ಎಂದು ಷರತ್ತು ಹಾಕಿತ್ತು. ಇದರಿಂದಾಗಿ ಸುಸೂತ್ರವಾಗಿ ರಚನೆಯಾಗಬೇಕಿದ್ದ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಗ್ರಹಣ ಹಿಡಿದಂತಾಗಿತ್ತು.

ಈ ಹಂತದಲ್ಲೇ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದ ಮೆಹಬೂಬಾ ಮುಫ್ತಿ ಅವರಿಗೆ ಸಾಂತ್ವನ ಹೇಳಲು ಸೋನಿಯಾ ಗಾಂಧಿ ಮೆಹಬೂಬಾ ಅವರ ಶ್ರೀನಗರ ನಿವಾಸಕ್ಕೆ ಭೇಟಿ ನೀಡಿದ್ದು ಹಲವು ಊಹಪೋಹಗಳಿಗೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್ ಅಂಬಿಕಾ ಸೋನಿ, ಸೈಫುದ್ದೀನ್ ಸೋಜ್, ಜಿ.ಎ. ಅಮೀರ್ ಅವರಿದ್ದ ಕೈ ತಂಡದ ದಿಢೀರ್ ಭೇಟಿಯ ಹಿಂದೆ ರಾಜಕೀಯ ಉದ್ದೇಶವಿರಬಹುದೆಂದು ಹೇಳಲಾಗಿತ್ತು. ಸರ್ಕಾರ ರಚಿಸಬೇಕಾದ ಪಿಡಿಪಿ- ಬಿಜೆಪಿ ನಡುವೆ ಷರತ್ತು, ಪ್ರತಿ ಷರತ್ತಿನಂತಹ ಬೆಳವಣಿಗೆಗಳು ನಡೆಯುತ್ತಿರುವಾಗ ಸೋನಿಯಾ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿತ್ತು. ಈ ಗೊಂದಲಗಳಿಂದ ಜಮ್ಮು-ಕಾಶ್ಮೀರದಲ್ಲಿ ಏಳನೇ ಬಾರಿಗೆ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿತ್ತು. 1977ರಲ್ಲಿ ಮೊದಲ ಬಾರಿಗೆ ಅಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿತ್ತು. ವಿಶೇಷವೆಂದರೆ, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಿಕೆಯಾಗುವಲ್ಲಿ ಮುಫ್ತಿ ಮೊಹಮ್ಮದ್ ಸಯೀದ್ ಅವರೇ ಎಲ್ಲ ಅವಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

ಕಳೆದ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಮುಫ್ತಿ ಸಯ್ಯದ್ ಅವರ ಪಿಡಿಪಿ ಇಪ್ಪತ್ತೆಂಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಖಂಡಿತಾ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸುತ್ತದೆ ಎಂದು ಭಾವಿಸಲಾಗಿದ್ದರೂ, ಆ ಪಕ್ಷ ಇಪ್ಪತ್ತೇಳು ಸ್ಥಾನಕಷ್ಟೇ ತೃಪ್ತಿಪಡಬೇಕಾಯ್ತು. ಹಾಗೇ ನೋಡಿದರೇ 2008ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಹನ್ನೊಂದು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಸಂಖ್ಯೆ ಇಪ್ಪತ್ತೇಳಾಗಿದ್ದೇ ಬಿಜೆಪಿಯ ಸಮಾಧಾನಕ್ಕೆ ಕಾರಣವಾಗಿತ್ತು. ಪಿಡಿಪಿ ಇಪ್ಪತ್ತೆಂಟು, ಬಿಜೆಪಿ ಇಪ್ಪತ್ತೇಳು, ನ್ಯಾಶನಲ್ ಕಾನ್ಫರೆನ್ಸ್ 15, ಕಾಂಗ್ರೆಸ್ 12, ಇತರರು ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದರು. ಇಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್, ಇತರರ ಜೊತೆ ಸೇರಿ ಪಿಡಿಪಿ ಸಕರ್ಾರ ರಚಿಸಬಹುದಿತ್ತು. ಆದರೆ ಒಮರ್ ಅಬ್ದುಲ್ಲಾ ಕಂಡೀಷನ್ಗಳನ್ನು ಮುಂದಿಟ್ಟು ಮೈತ್ರಿಗೆ ಹಸಿರು ನಿಶಾನೆ ತೋರಿಸಿದರು. ಅತ್ತ ಬಿಜೆಪಿಗೆ ಬಿಲ್ಕುಲ್ ಬೆಂಬಲಿಸುವುದಿಲ್ಲ ಎಂದೂ ಹೇಳಿದರು. ಉಳಿದಂತೆ ಕಾಂಗ್ರೆಸ್ಗೆ ಅಧಿಕಾರ ಸಿಗುವುದಾದರೇ ಯಾರ ಜೊತೆಗಾದ್ರೂ ಮೈತ್ರಿಗೆ ಸಿದ್ಧವೆಂಬ ಪರಿಸ್ಥಿತಿಯಿತ್ತು.

ಸೆಕ್ಯುಲರ್ ಆಡಳಿತದ ಮಂತ್ರ ಪಠಿಸುವವರ ಜೊತೆ ಸಂಬಂಧ ಸುಧಾರಿಸುವುದು ಕಷ್ಟ, ಹಿಡಿತ ತನ್ನಲ್ಲಿಟ್ಟುಕೊಳ್ಳುವುದಾದರೇ ಬಿಜೆಪಿ ಜೊತೆ ಮೈತ್ರಿಗೆ ಸಿದ್ಧ ಎಂದು ಪಿಡಿಪಿ ನಿರ್ಧರಿಸಿ ಅದರ ಮುಂದೆ ಆಫರ್ ಇಟ್ಟಿತ್ತು. ಬಿಜೆಪಿಯೂ ಪಿಡಿಪಿ ಷರತ್ತುಗಳಿಗೆಲ್ಲ ಗೋಣಾಡಿಸಿ ಮೈತ್ರಿಕೂಟ ಸರ್ಕಾರ ರಚಿಸಿಯೇಬಿಟ್ಟಿತ್ತು. ಚುನಾವಣೆ ಫಲಿತಾಂಶ ಬಂದು ಬರೋಬ್ಬರಿ ಎರಡು ತಿಂಗಳ ಬಳಿಕ ಪಿಡಿಪಿ-ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿತ್ತು. ಹಲವು ದಿನಗಳ ಮಾತುಕತೆ ಅಂತಿಮ ಹಂತವನ್ನು ತಲುಪಿ ಎರಡೂ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಸಹಮತಕ್ಕೆ ಬಂದಿದ್ದವು. ಷರತ್ತಿನ ಪ್ರಕಾರ ಮೈತ್ರಿ ಸರ್ಕಾರದಲ್ಲಿ ಪಿಡಿಪಿ ನೇತಾರ ಮುಫ್ತಿ ಮೊಹಮ್ಮದ್ ಸಯೀದ್ 6 ವರ್ಷಗಳ ಕಾಲ ಮುಖ್ಯಮಂತ್ರಿಯಾಗುತ್ತಾರೆ. ಬಿಜೆಪಿಯ ನಿರ್ಮಲ್ ಸಿಂಗ್ ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರ್ಧಾರಕ್ಕೆ ಬರಲಾಯಿತು.

ಮೈತ್ರಿ ಸರ್ಕಾರ ರಚನೆಯಾಗಿದ್ದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ಏಳನೇ ದಿನಕ್ಕೆ ಮಸ್ರತ್ ಅಲಂ ವಿಚಾರದಲ್ಲಿ ಮೈತ್ರಿ ಕಡಿದುಬೀಳುವ ಸಾಧ್ಯತೆಯಿತ್ತು. ಅಂತೂ ಇಂತೂ ಹಲವು ತಿಂಗಳ ಆಡಳಿತ ನಡೆಸಿದ ಮೈತ್ರಿ ಸರ್ಕಾರದಲ್ಲಿ ಮತ್ತೆ ಬಿರುಕು ಕಾಣಿಸಿತ್ತು. ಮುಫ್ತಿ ಸಯ್ಯದ್ ಮರಣ ನಂತರ, ಅವತ್ತಿನ ಷರತ್ತುಬದ್ಧ ಮಾತುಕತೆಯಲ್ಲಿ ಬದಲಾವಣೆಯಾಗಬೇಕೆಂದು ಬಿಜೆಪಿ ಪಟ್ಟು ಹಿಡಿದಿತ್ತು. ಅತ್ತ ಪಿಡಿಪಿಯೂ ಕೆಲ ಹೊಸಬೇಡಿಕೆಗಳನ್ನು ಮುಂದಿಟ್ಟಿತ್ತು. ಒಂದುವೇಳೆ ಮೈತ್ರಿ ಸರ್ಕಾರ ಬಿದ್ದುಹೋದರೇ ಬಿಜೆಪಿ ಅಥವಾ ಪಿಡಿಪಿ- ಇವರಲ್ಲೊಬ್ಬರ ಜೊತೆ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಉಳಿದವರು ಮೈತ್ರಿ ಮಾಡಿಕೊಳ್ಳಲು ಮುಂದಾಗಬಹುದೆಂಬ ಸೂಚನೆಗಳಿದ್ದವು. ಆದರೆ ಎಲ್ಲಾ ಊಹಪೋಹಗಳನ್ನು ಮೀರಿ ಮೈತ್ರಿ ಮುಂದುವರಿದಿದೆ. ಫೈರ್ ಬ್ರಾಂಡ್ ಮೆಹಬೂಬ ಮುಫ್ತಿ ಜಮ್ಮು ಕಾಶ್ಮೀರದ ಪ್ರಥಮ ಮಹಿಳಾ ಸಿಎಂ ಆಗಿ ಅಧಿಕಾರಕ್ಕೇರಿದ್ದಾರೆ.

POPULAR  STORIES :

ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video

ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

ಪ್ರಿಯಾಂಕ ಛೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ..?

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?

`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...