ಅಕ್ರಮ ಹಣ ಹೊಂದಿರುವ ಆರೋಪ ತಡೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಡಿಕೆಶಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ದೆಹಲಿಯ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಡಿಕೆಶಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ಇನ್ನು ಆಸ್ಪತ್ರೆಯಿಂದ ಬಿಡುಗಡೆಗೊಂಡ ಡಿಕೆಶಿ ಅವರ ಸುದ್ದಿ ಕೇಳಿ ಖುಷಿ ಪಡುವಂತಿಲ್ಲ ಏಕೆಂದರೆ ಆಸ್ಪತ್ರೆಯಿಂದ ಬಂದ ಡಿಕೆಶಿ ಅವರನ್ನು ಇದೀಗ ಶಿಫ್ಟ್ ಮಾಡಿರುವುದು ತಿಹಾರ್ ಜೈಲಿಗೆ. ಹೌದು ಬಂಧನದಲ್ಲಿದ್ದ ಡಿಕೆಶಿ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು ಇದೀಗ ಚೇತರಿಸಿಕೊಂಡ ನಂತರ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಇನ್ನು ಡಿಕೆಶಿ ಅವರು ತಿಹಾರ್ ಜೈಲಿಗೆ ಹೋಗುತ್ತಿರುವ ಕರ್ನಾಟಕದ ಮೊದಲ ರಾಜಕಾರಣಿ ಎಂಬ ಕುಖ್ಯಾತಿಗೂ ಪಾತ್ರರಾಗಿದ್ದಾರೆ. ಇಂದು ಕೋರ್ಟಿನಲ್ಲಿ ಡಿಕೆಶಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಒಂದು ವೇಳೆ ಡಿಕೆಶಿ ಅವರಿಗೆ ಜಾಮೀನು ಸಿಕ್ಕರೆ ಒಂದೇ ದಿನದಲ್ಲಿ ಅವರ ತಿಹಾರ್ ಜೈಲಿನ ವಾಸ ಅಂತ್ಯವಾಗಲಿದೆ.