ಉತ್ತರ ಕರ್ನಾಟಕದಿಂದ ಜೆಡಿಎಸ್ ವತಿಯಿಂದ ಕೆಲವರು ಆಯ್ಕೆಯಾಗಿದ್ದರೂ ಅದು ಅವರ ಸ್ವಂತ ವರ್ಚಸ್ಸಿನ ಮೇಲೆ ಎಂಬ ಮಾತುಗಳ ನಡುವೆ, ತಮ್ಮ ಪಕ್ಷದ ಮೇಲೆ ಪ್ರೀತಿ ತೋರದ ಉತ್ತರ ಕರ್ನಾಟಕ ಜನತೆ ಮೇಲೆ ಜೆಡಿಎಸ್ ವರಿಷ್ಠ ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳ ಪಕ್ಷದ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿರುವ ಅವರು, ನನ್ನ ಹಾಗೂ ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದೇವೆ. ಆದರೆ ಅಲ್ಲಿನ ಜನ ಅದ್ಯಾಕೋ ನಮ್ಮ ಪಕ್ಷದ ಮೇಲೆ ಪ್ರೀತಿ ತೋರಿಸುತ್ತಿಲ್ಲ ಎಂದಿದ್ದಾರೆ