ಕಿಚ್ಚ ಸುದೀಪ್ ಎಂದರೆ ಅಪಾರವಾದ ಮಹಿಳಾ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟ. ಮಹಿಳೆಯರಿಗೆ ಸದಾ ಗೌರವವನ್ನು ನೀಡುವ ಕಾರಣಕ್ಕೆ ಕಿಚ್ಚ ಸುದೀಪ್ ಅವರನ್ನು ಮಹಿಳಾ ಅಭಿಮಾನಿಗಳು ಅವರ ನಟನೆ ಮಾತ್ರವಲ್ಲದೆ ನಿಜ ಜೀವನದ ನಡತೆಗೂ ಸಹ ಅಭಿಮಾನಿಗಳಾಗಿದ್ದಾರೆ. ಇನ್ನು ಇಂತಹ ಕಿಚ್ಚ ಸುದೀಪ್ ಅವರ ವಿರುದ್ಧ ಇದೀಗ ಅದೇ ಮಹಿಳೆಯರು ತಿರುಗಿ ಬಿದ್ದಿದ್ದಾರೆ. ಹೌದು ಕಿಚ್ಚ ಸುದೀಪ್ ಅವರ ವಿರುದ್ಧ ಮಹಿಳೆಯರು ತಿರುಗಿ ಬೀಳಲು ಕಾರಣ ಕಿಚ್ಚ ಸುದೀಪ್ ಅವರ ಆ ಒಂದು ಟ್ವೀಟ್.
ಹೌದು ಕಿಚ್ಚ ಸುದೀಪ್ ಅವರು ಮಾಡಿದ ಒಂದು ಟ್ವೀಟ್ ನಿಂದಾಗಿ ಇದೀಗ ಮಹಿಳಾ ಬಳಗ ಕಿಚ್ಚ ಸುದೀಪ್ ಅವರ ವಿರುದ್ಧವೇ ತಿರುಗಿ ಬಿದ್ದಿದೆ. ಪೈರಸಿ ಮಾಡಿದವರ ವಿರುದ್ಧ ಮಾತನಾಡಲು ಹೋದ ಕಿಚ್ಚ ಸುದೀಪ್ ಅವರು ನಾನು ಮತ್ತು ನನ್ನ ಸ್ನೇಹಿತರು ಕೈಗೆ ತೊಟ್ಟಿರುವುದು ಕಡಗ ಬಳೆಯಲ್ಲ ಎಂದು ಟ್ವೀಟ್ ಮಾಡಿದ್ದರು. ಇನ್ನು ಈ ಟ್ವೀಟ್ ವಿರುದ್ಧ ಇದೀಗ ರೊಚ್ಚಿಗೆದ್ದಿರುವ ಮಹಿಳೆಯರು ಮಹಿಳೆಯರನ್ನು ಕಿಚ್ಚ ಸುದೀಪ್ ಅವರು ತುಂಬಾ ಕನಿಷ್ಠವಾಗಿ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹೌದು ಈ ಟ್ವೀಟ್ ನಲ್ಲಿ ಕೈಗೆ ಬಳೆ ತೊಟ್ಟಿಲ್ಲ ಎಂದರೆ ಮಹಿಳೆಯರನ್ನು ತುಂಬಾ ಕೆಳಮಟ್ಟದಲ್ಲಿ ನೋಡಿದಂತೆ ಎಂದು ಕಿಚ್ಚ ಸುದೀಪ್ ಅವರ ವಿರುದ್ಧ ಇದೀಗ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.