ಹೊಸ ಟ್ರಾಫಿಕ್ ದಂಡದ ನಿಯಮ ಜಾರಿಗೆ ಬಂದಾಗಿನಿಂದ ಸಾರ್ವಜನಿಕರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ವಾದ ವಿವಾದಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ಟ್ರಾಫಿಕ್ ಪೇದೆಯೊಬ್ಬ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೊ ವೈರಲ್ ಆಗಿತ್ತು. ತಾನೊಬ್ಬ ಟ್ರಾಫಿಕ್ ಪೇದೆಯಲ್ಲ ಸರ್ವಾಧಿಕಾರಿ ಎಂಬ ರೇಂಜಿಗೆ ಅಮಾಯಕ ಸಾರ್ವಜನಿಕರ ಮೇಲೆ ದರ್ಪವನ್ನು ಆ ಟ್ರಾಫಿಕ್ ಪೇದೆ ತೋರಿಸಿದ್ದ.
ಇದೀಗ ಡ್ರೈವರ್ ಒಬ್ಬ ರೊಚ್ಚಿಗೆದ್ದಿದ್ದು ಟ್ರಾಫಿಕ್ ಪೊಲೀಸರಿಗೆ ವಿಡಿಯೋ ಮುಖಾಂತರ ಓಪನ್ ಚಾಲೆಂಜ್ ವೊಂದನ್ನು ಹಾಕಿದ್ದಾನೆ. ಮೈಸೂರು ಮೂಲದ ಕ್ಯಾಬ್ ಡ್ರೈವರ್ ವಿಡಿಯೋ ಒಂದನ್ನು ಮಾಡಿದ್ದು ಅದರಲ್ಲಿ ನಾನು ಅಕ್ಟೋಬರ್ ತಿಂಗಳಿನ 2 ನೇ ತಾರೀಖಿನಂದು ಬೆಂಗಳೂರಿನ ಏರ್ ಪೋರ್ಟ್ ಗೆ ಬರಲಿದ್ದೇನೆ. ಆದರೆ ನನ್ನ ಬಳಿ ಯಾವುದೇ ರೀತಿಯ ಡಾಕ್ಯುಮೆಂಟ್ ಇಲ್ಲ ಎಲ್ಲಾ ಡಾಕ್ಯುಮೆಂಟ್ ಗಳ ಅವಧಿ ಮುಗಿದು ನಾಲ್ಕು ವರ್ಷ ಕಳೆಯುತ್ತಿದೆ. ಪೊಲೀಸರಿಗೆ ತಾಕತ್ತಿದ್ದರೆ ನನ್ನನ್ನು ಆ ದಿನ ಹಿಡಿಯಲು ಪ್ರಯತ್ನಿಸಲಿ ಎಂದು ಓಪನ್ ಆಗಿ ಚಾಲೆಂಜ್ ಹಾಕಿದ್ದಾನೆ.