ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರ ಇದೇ ಶುಕ್ರವಾರದಂದು ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಸಹ ಈ ಚಿತ್ರಕ್ಕೆ ಕೊಂಚ ಬಂಡವಾಳವನ್ನು ಹೂಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅವರು ತುಂಬಾ ಇಷ್ಟಪಟ್ಟು ಮಾಡಿರುವ ಚಿತ್ರ ಇದಾಗಿದೆ. ಇನ್ನು ಇತ್ತೀಚೆಗಷ್ಟೇ ಗೀತಾ ಚಿತ್ರದ ಪ್ರೆಸ್ ಮೀಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪ್ರೆಸ್ ಮೀಟ್ ವೇಳೆ ಮಾತನಾಡಿದ ಗಣೇಶ್ ಅವರು ಪರಭಾಷಾ ಚಿತ್ರ ವಿತರಕರಿಗೆ ಮತ್ತು ನಿರ್ಮಾಪಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಏಕೆಂದರೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರ ಬಿಡುಗಡೆಯಾದ ಐದು ದಿನಕ್ಕೆ ತೆಲುಗಿನ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಗೀತಾ ಚಿತ್ರದ ಚಿತ್ರಮಂದಿರಗಳ ಮೇಲೆ ಪರಭಾಷಾ ಚಿತ್ರದ ವಿತರಕರು ಕಣ್ಣು ಹಾಕಲು ಬರಬೇಡಿ ನನ್ನ ಚಿತ್ರದ ಮೇಲೆ ಕೈಇಡಲು ಬರಬೇಡಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ. ನಮ್ಮ ವ್ಯವಹಾರ ನಾವು ಮಾಡುತ್ತೇವೆ ನಿಮ್ಮ ವ್ಯವಹಾರವನ್ನು ನೀವು ನೋಡಿಕೊಳ್ಳಿ ಎಂದು ಗಣೇಶ್ ಅವರು ಇದೇ ವೇಳೆ ತಿಳಿಸಿದ್ದಾರೆ.