ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದ ವಿಡಿಯೋ ಎಂದರೆ ಟ್ರಾಫಿಕ್ ಪೇದೆಯೊಬ್ಬ ಮಿನಿ ಟ್ರಕ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ವಿಡಿಯೋ. ಹೌದು ಸುನಿಲ್ ಎಂಬಾತನಿಗೆ ಟ್ರಾಫಿಕ್ ಪೇದೆಯೊಬ್ಬ ಮಾನವೀಯತೆಯನ್ನು ಮರೆತು ಸರ್ವಾಧಿಕಾರಿ ರೀತಿ ಆತನಿಗೆ ಥಳಿಸಿದ್ದ ಈ ಒಂದು ಅಮಾನವೀಯ ಕೆಲಸವನ್ನು ಟ್ರಕ್ ಚಾಲಕ ಸುನೀಲ್ ವಿಡಿಯೊ ಮಾಡಿಕೊಂಡಿದ್ದ ಮತ್ತು ಅದನ್ನು ತದನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ವಿಡಿಯೊ ನೋಡಿದ ಪ್ರತಿಯೊಬ್ಬರು ಸಹ ಪೊಲೀಸ್ ಪೇದೆ ಯದ್ದೇ ತಪ್ಪು ಎಂದು ಹೇಳಿದರೆ ಪೊಲೀಸರು ಮಾತ್ರ ಚಾಲಕ ಸುನೀಲ್ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದರು.
ಇನ್ನು ಇದೀಗ ಮಾಧ್ಯಮದವರ ಜೊತೆ ಮಾತನಾಡಿರುವ ಚಾಲಕ ಸುನೀಲ್ ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಕೊಡಿ ನಮ್ಮಂಥವರಿಗೆ ಶಿಕ್ಷೆ ಏಕೆ? ಎಂದು ತನಗಾದ ಅನ್ಯಾಯವನ್ನು ತೋಡಿಕೊಂಡಿದ್ದಾನೆ. ಮನೆಯಲ್ಲಿ ನಮ್ಮ ತಾಯಿಗೆ ಧಮ್ಕಿ ಹಾಕಿದ್ದಾರೆ ನನಗೆ ಜೀವ ಭಯ ಇದೆ ನಾನು ಸಾಯುತ್ತೇನೆ ಎಂದು ಸುನೀಲ್ ತನ್ನ ಮೇಲೆ ಆಗುತ್ತಿರುವ ಅನ್ಯಾಯವನ್ನು ಹೇಳಿಕೊಂಡಿದ್ದಾನೆ.