ಕೇಂದ್ರ ಚುನಾವಣಾ ಆಯೋಗ ನ.24ಕ್ಕೆ ದಿನಾಂಕ ನಿಗದಿ ಪಡಿಸಿ ಘೋಷಣೆ ಮಾಡಿದ್ದ ಉಪಚುನಾವಣೆಗಳಿಗೆ ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ ಎರಡು ದಿನಗಳ ಹಿಂದೆ ತಡೆಯಾಜ್ಞೆ ನೀಡಿದೆ. ಅಲ್ಲಿಗೆ ಕೊಂಚ ಉಸಿರುಬಿಟ್ಟುಕೊಂಡು ನಿರಾಳರಾಗಿದ್ದ ಅನರ್ಹರಿಗೆ ನಿನ್ನೆ ಮತ್ತೊಂದು ಪೆಟ್ಟು ಬಿದ್ದಿದ್ದು, ಚುನಾವಣಾ ಆಯೋಗ ದಿನಾಂಕವನ್ನು ಪರಿಷ್ಕರಿಸಿ 15 ಕ್ಷೇತ್ರಗಳಿಗೆ ಡಿ.5ಕ್ಕೆ ಉಪಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದೆ.ನ.11 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳುತ್ತದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ 17 ಮಂದಿ ಹೊಸದಾಗಿ ಬಿಜೆಪಿ ಸರ್ಕಾರ ರಚನೆಯಾಗಿಯೇ ಹೋಯ್ತು, ನಾವು ಸಚಿವರಾಗೇ ಬಿಡ್ತೀವಿ ಎಂಬ ನಿರೀಕ್ಷೆಯಲ್ಲಿದ್ದರು. ಸಚಿವರಾಗಿದ್ದ ಎಂ.ಟಿ.ಬಿ.ನಾಗರಾಜ್ ಕೂಡ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಪ್ರಬಲ ಖಾತೆ ನಿರೀಕ್ಷೆಯಲ್ಲಿದ್ದರು. ಆದರೆ ಆಗಿನ ಸ್ಪೀಕರ್ ರಮೇಶ್‍ಕುಮಾರ್ ಅವರು ಅಷ್ಟು ಮಂದಿಯನ್ನು ಅನರ್ಹಗೊಳಿಸಿ ದೊಡ್ಡ ಪೆಟ್ಟು ನೀಡಿದ್ದಾರೆ ಇದೀಗ ಆ ಶಸಕರುಗಳ ಪರಿಸ್ಥಿತಿ ಏನು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕಾಡುತ್ತಿದೆ.