ಪತ್ರಿಕಾ ಪ್ರಕಟಣೆ ನೀಡಿರುವ ಬೆಂಗಳೂರು ನಗರ ಸಂಚಾರಿ ವಿಭಾಗದ ಡಿಸಿಪಿ ಜಿ.ಎ.ಜಗದೀಶ್ ಅವರು ಮೋಟಾರು ವಾಹನ ಕಾಯ್ದೆ ಅನ್ವಯ ಇತ್ತೀಚೆಗೆ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು ಹೆಚ್ಚುವರಿ ಮಾಡಿದೆ. ಇದರಿಂದ ಸಾರ್ವಜನಿಕರು ಪೊಲೀಸರ ಜತೆ ಸಂಘರ್ಷಕ್ಕಿಳಿದಿದ್ದಾರೆ. ಹಲ್ಲೆ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಮುಂದುವರೆದಿದೆ.
ಇದು ಒಳ್ಳೆಯ ಬೆಳವಣಿಗೆ ಅಲ್ಲ. ಗುಂಪು ಸೇರಿ ಜಗಳ ಮಾಡುವುದು, ಹೊಡೆದಾಟ, ಹಲ್ಲೆ ಮಾಡುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು, ಶಾಂತಿ ಭಂಗ ಮಾಡುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಕಾನೂನು ಬಾಹೀರವಾಗಿದೆ.ರಸ್ತೆ ಅಪಘಾತಗಳಿಗೆ ಕಾರಣವಾಗುವ ಅಪರಾಧಗಳಿಗೆ ದಂಡಂ ದಶಗುಣಂ ಆಗಲೇಬೇಕು. ಕಾನೂನು ಬಿಗಿಯಾದಾಗ ಮಾತ್ರ ಜನರ ಮನೋಭಾವ ಬದಲಾಗುತ್ತದೆ. ಸಿಗ್ನಲ್ ಜಂಪ್ ಮಾಡುವುದು, ಕುಡಿದು ವಾಹನ ಚಲಾಯಿಸುವುದು ಅಪರಾಧ ಎಂದು ಎಚ್ಚರಿಕೆ ನೀಡಿದ್ದಾರೆ