ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಭರ್ಜರಿ ಐವತ್ತು ದಿನಗಳನ್ನು ಪೂರೈಸಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಹೀಗಿರುವಾಗಲೇ ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಕುರುಕ್ಷೇತ್ರ ಚಿತ್ರದ ಟೆಲಿವಿಷನ್ ಪ್ರೀಮಿಯರ್ ಪ್ರೋಮೋವನ್ನು ಹಂಚಿಕೊಂಡಿದೆ. ಹೌದು ಜೀ ಕನ್ನಡ ಕುರುಕ್ಷೇತ್ರ ಚಿತ್ರದ ಸ್ಯಾಟಲೈಟ್ ರೈಟ್ ಅನ್ನು ಖರೀದಿ ಮಾಡಿತ್ತು.
ಹೀಗಾಗಿ ಈ ಪ್ರೋಮೋವನ್ನು ಹಾಕಿದೆ. ಆದರೆ ಇದರಿಂದ ಸಿನಿಮಾಭಿಮಾನಿಗಳು & ಡಿಬಾಸ್ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಇದಕ್ಕೆ ಕಾರಣ ಚಿತ್ರಮಂದಿರದಲ್ಲಿ ಒಳ್ಳೆ ಪ್ರದರ್ಶನ ಕಾಣ್ತಾ ಇರೋ ಕುರುಕ್ಷೇತ್ರ ಸಿನಿಮಾವನ್ನು ಇಷ್ಟು ಬೇಗ ಕಿರುತೆರೆಗೆ ಹಾಕ್ತಾ ಇರೋದು. ಹೌದು ಚೆನ್ನಾಗಿ ಪ್ರದರ್ಶನ ಕಾಣ್ತಾ ಇರೋ ಚಿತ್ರವನ್ನು ಈಗಲೇ ಟಿವಿಗೆ ಹಾಕುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.