ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದ್ದು, ಫಲಿತಾಂಶ ಪ್ರಕಟಗೊಂಡ ಕೆಲವೇ ಸಮಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಳ್ಳಲಿದೆ ಹಾಗು ಅನರ್ಹ ಶಾಸಕರಿಗೆ ಅನುಕೂಲವಾಗಲೆಂದೇ ಚುನಾವಣೆಯನ್ನು 65 ದಿನ ಮುಂಚಿತವಾಗಿ ಘೋಷಿಸಲಾಗಿದೆ. ಮೊದಲು ಚುನಾವಣೆ ಘೋಷಣೆ ಮಾಡಿದ ಆಯೋಗ ನಂತರ ರದ್ದು ಮಾಡಿತು. ಇದೀಗ ಏಕಾಏಕಿ ಮತ್ತೆ ಉಪ ಚುನಾವಣೆ ದಿನಾಂಕ ಘೋಷಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ತಮ್ಮ ಪಕ್ಷ ಇನ್ನು ಮುಂದೆ ಏಕಾಂಗಿಯಾಗಿ ಸ್ಪರ್ಧಿಸಲಿ ಎಂದು ಈಗಾಗಲೇ ಹೇಳಿರುವ ಸಿದ್ದು ಯಾವುದೇ ಕಾರಣಕ್ಕು ಅವರ ಜೊತೆ ಮೈತ್ರಿ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಏಕಾಂಗಿಯಾಗಿಯೇ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.