ನೆರೆ ಪರಿಹಾರ ನೀಡುತ್ತೆವೆ ಎಂದು ಹೇಳಿದ್ದ ಸರ್ಕಾರ ವಿಳಂಬವಾಗಿದ್ದರಿಂದ ಮನನೊಂದ ರೈತ ಚಂದ್ರೇಗೌಡ(55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಎಸ್.ಕೆ. ಮೇಘಲ್ ಗ್ರಾಮದ ಚಂದ್ರೇಗೌಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾರೀ ಮಳೆಗೆ ಒಂದು ಎಕರೆ, ಗದ್ದೆ ತೋಟ ನೀರು ಪಾಲಾಗಿದ್ದು, ಹಾಳಾಗಿದ್ದ ಗದ್ದೆ ತೋಟವನ್ನು ಸರಿಮಾಡಿಸಲು ಸಾಲ ಮಾಡಿಕೊಂಡಿದ್ದರು. ಆದರೆ, ಸರ್ಕಾರದಿಂದ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುದುರೆಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.