ಪ್ರಸ್ತುತ ಕನ್ನಡ ಕಿರುತೆರೆಯ ದುನಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ. ಹೌದು ಸಿನಿಮಾ ರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಇದೀಗ ಕಿರುತೆರೆಯತ್ತ ಅನಿರುದ್ಧ ಅವರು ಮುಖ ಮಾಡಿದ್ದಾರೆ. ಅವರು ಜೊತೆ ಜೊತೆಯಲ್ಲಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು ಆರ್ಯವರ್ಧನ್ ಎಂಬ ಬಿಸಿನೆಸ್ ಮ್ಯಾನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಸದ್ಯ ಈ ಧಾರಾವಾಹಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದ್ದು ಸಖತ್ ಟಿಆರ್ಪಿ ಸಹ ಬರುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಅನಿರುದ್ಧ್ ಅವರು ಈ ಧಾರಾವಾಹಿ ಮೂಲಕ ಮತ್ತೆ ಟ್ರ್ಯಾಕ್ಗೆ ಮರಳಿದ್ದು ಅಪಾರವಾದ ಸೀರಿಯಲ್ ಅಭಿಮಾನಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಅನಿರುದ್ಧ ಅವರಿಗೆ ಜೊತೆಜೊತೆಯಲ್ಲಿ ಧಾರಾವಾಹಿಯಲ್ಲಿ ಅಭಿನಯಿಸಲು ಒಂದು ದಿನಕ್ಕೆ 35000 ರೂಪಾಯಿ ಸಂಭಾವನೆಯನ್ನು ನೀಡಲಾಗುತ್ತಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.