ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 7ನೇ ಸೀಸನ್ ಆರಂಭವಾಗಿದ್ದು 18 ಮಂದಿ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ.
ನಟ ಕುರಿ ಪ್ರತಾಪ್, ಪತ್ರಕರ್ತ ರವಿಬೆಳಗೆರೆ, ನಟಿಯರಾದ ಪ್ರಿಯಾಂಕಾ, ಚಂದನಾ, ದೀಪಿಕಾ ದಾಸ್, ಭೂಮಿ ಶೆಟ್ಟಿ, ಅಗಡಿ ಮಠದ ಪೀಠಾಧಿಪತಿ ಗುರುಲಿಂಗ ಸ್ವಾಮೀಜಿ, ಚೈತ್ರಾ ವಾಸುದೇವ್, ಶೈನ್ ಶೆಟ್ಟಿ, ರಾಜು ತಾಳಿಕೋಟೆ, ಹರೀಶ್ ರಾಜ್, ಚಂದನ್ ಆಚಾರ್, ಚೈತ್ರಾ ಕೋಟೂರು, ಸುಜಾತಾ, ವಾಸುಕಿ ವೈಭವ್, ಕಿಶನ್ ಈ ಬಾರಿ ಸ್ಪರ್ಧಿಗಳಾಗಿದ್ದಾರೆ. 100 ದಿನ ಶೋ ನಡೆಯಲಿದ್ದು ವಿಜೇತರಿಗೆ 50 ಲಕ್ಷ ರೂ ಬಹುಮಾನ ನೀಡಲಾಗುವುದು.