ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪತ್ರಕರ್ತ ರವಿ ಬೆಳಗೆರೆ ಅವರು ಹೋಗುತ್ತಾರೆ ಎಂಬ ವಿಷಯ ಹರಿದಾಡಿದ್ದೇ ತಡ ಎಲ್ಲರಲ್ಲಿಯೂ ಸಹ ಕುತೂಹಲ ಹೆಚ್ಚಾಯಿತು. ಇನ್ನು ರವಿ ಬೆಳಗೆರೆ ಅವರು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ಸೇದಲು ಸಿಗರೇಟ್ ನೀಡಿ ಎಂದು ಬಿಗ್ ಬಾಸ್ ಅವರಲ್ಲಿ ಕೇಳಿಕೊಳ್ಳುವ ಟೀಸರ್ ಬಿಡುಗಡೆಯಾದಾಗ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಪ್ರೇಕ್ಷಕರಿಗೆ ಮತ್ತಷ್ಟು ಕ್ರೇಜ್ ಹೆಚ್ಚಿತು. ಇಷ್ಟೆಲ್ಲ ಮನರಂಜನೆ ನೀಡಲು ಪ್ರಾರಂಭಿಸಿದ್ದ ರವಿ ಬೆಳಗೆರೆ ಅವರು ಬಿಗ್ ಬಾಸ್ ಕಾರ್ಯಕ್ರಮದಿಂದ ಮೊದಲ ದಿನವೇ ಹೊರ ಬಂದಿದ್ದಾರೆ ಎಂಬ ಸುದ್ದಿ ಇದೆ.
ಬಿಗ್ ಬಾಸ್ ನ ಮೊದಲ ವಾರದ ಕ್ಯಾಪ್ಟನ್ ಆಗಿರುವ ನಟಿ ಸುಜಾತಾ ಅವರು ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಓದುವಾಗ ಎಲ್ಲಾ ಸ್ಪರ್ಧಿಗಳು ಇದ್ದರು ಆದರೆ ರವಿ ಬೆಳಗೆರೆಯವರು ಮಾತ್ರ ಅಲ್ಲಿ ಇರಲಿಲ್ಲ. ಇನ್ನು ಇದನ್ನು ಗಮನಿಸಿದ ಪ್ರೇಕ್ಷಕರು ರವಿ ಬೆಳಗೆರೆ ಅವರು ಎಲ್ಲಿ ಎಂಬ ಚರ್ಚೆಯನ್ನು ಮಾಡಲು ಆರಂಭಿಸಿದರು ಇದೀಗ ಆ ಎಲ್ಲಾ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು ರವಿ ಬೆಳಗೆರೆ ಅವರು ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಇದೆ. ಹೌದು ಶುಗರ್ ಲೆವೆಲ್ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಅವರು ಬಿಗ್ ಬಾಸ್ ನಲ್ಲಿ ಸ್ಪರ್ಧಿಸಲಾಗದೆ ಆಚೆ ಬಂದಿದ್ದಾರೆ ಎಂಬ ಸುದ್ದಿ ಇದೆ ಆದರೆ ಮತ್ತೆ ಬಿಗ್ ಬಾಸ್ ಮನೆಗೆ ಹಿಂತಿರುಗುವ ಎಂದು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ .