No menu items!
13.9 C
Munich
Wednesday, April 29, 2026

ಡಿಫರೆಂಟ್ ಆಗಿದೆ ವೋಗ್ ಎಂಟರ್ಟೈನ್ಮೆಂಟ್ ಅವರ “ಶುಕ್ರದೆಸೆ”

Must read

 ಯೂಟ್ಯೂಬ್ನಲ್ಲಿ ಶುಕ್ರದೆಸೆ ಚಿತ್ರದ ಮೋಷನ್ ಪೋಸ್ಟರ್ ಒಂದನ್ನು ವೋಗ್ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅನಿಲ್ ಬಿದಹಾಸ್, ಸೌಮ್ಯ ಜಗನ್ಮೂರ್ತಿ ಮತ್ತು ಖುಷ್ಬು ಶೆಟ್ಟಿ ಅವರ ಅಭಿನಯ ಶುಕ್ರದೆಸೆಗೆ ಇದ್ದು , ಜೋಸೆಫ್ ನೀನಾಸಂ ಅವರು ಈ ಶುಕ್ರದೆಸೆಗೆ ನಿರ್ದೇಶನವನ್ನು ಮಾಡಿದ್ದಾರೆ.


ಕಲಾವಿದ ಅನಿಲ್ ಬಿದಹಾಸ್ ಅವರೇ ಈ ಶುಕ್ರದೆಸೆಗೆ ಕಥೆ ಚಿತ್ರಕಥೆ ಸಂಭಾಷಣೆಯನ್ನು ಬರೆದಿದ್ದಾರೆ ಮತ್ತು ನಿರ್ಮಾಣದ ಹೊಣೆಯನ್ನು ಆನಿಶಾ ಬಿದಹಾಸ್ ಅವರು ಹೊತ್ತಿದ್ದಾರೆ. ಇನ್ನು ಚಿತ್ರದ ತಾಂತ್ರಿಕ ವರ್ಗ ಮತ್ತು ಕಲಾವಿದರ ವರ್ಗ ಪ್ರತಿಭಾನ್ವಿತ ಕಲಾವಿದರಿಂದ ಕೂಡಿದ್ದು ಒಂದೊಳ್ಳೆ ಕಂಟೆಂಟ್ ಇರುವಂತಹ ಚಿತ್ರ ಬರಲಿದೆ ಎಂಬುದರ ಸಂಶಯವೇ ಇಲ್ಲ.

ಇನ್ನು ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ನಲ್ಲಿ “ನಿಂತ್ಕೋ ಮಾತಾಡು ನನ್ನತ್ರ ಯಾಕಿಂಗ್ ಮಾಡ್ತೀಯಾ” ಎಂಬ ಡೈಲಾಗ್ ಅನ್ನು ಕಥಾ ನಾಯಕಿ ಹೇಳಿದ್ದು ಇದೊಂದು ಸೀಲಿಂಗ್ ವಿಡಿಯೋ ಇರಬಹುದಾ ಎಂಬ ಕುತೂಹಲವನ್ನು ಮೂಡಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article