ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅವರು ಬಡ ಕುಟುಂಬದಿಂದ ಬಂದಂತಹವರು ಎಂದು ಬಿಂಬಿಸಲು ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು. ಸರ್ದಾರ ವಲ್ಲಭಭಾಯಿ ಪಟೇಲ್ ಅವರು ತಮಗಾಗಿ ಸ್ವಂತ ಮನೆ ನಿರ್ಮಾಣ ಮಾಡಿಕೊಂಡಿರಲಿಲ್ಲ ಯಾಕೆಂದರೆ ತಾವು ಮನೆ ನಿರ್ಮಿಸಿಕೊಂಡರೆ ಇತರರಿಗೆ ಮನೆ ನಿರ್ಮಿಸಿಕೊಳ್ಳಲು ಹಣದ ಕೊರತೆ ಉಂಟಾಗುವುದೇನೋ ಎಂಬ ಕಾರಣಕ್ಕೆ ಅವರು ಸ್ವಂತ ಮನೆ ನಿರ್ಮಿಸಿಕೊಳ್ಳಲು ಇಚ್ಛಿಸಿರಲಿಲ್ಲ.
ಆದರೆ ಇಂದು ಮೋದಿ ಅವರು ಸರ್ದಾರ ವಲ್ಲಭಬಾಯಿ ಪಟೇಲ ಅವರ ಪ್ರತಿಮೆ ನಿರ್ಮಾಣಕ್ಕೆ 300 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಇಂದು ಏನಾದರೂ ಸರದಾರ ವಲ್ಲಬಾಯಿ ಪಟೇಲ್ ಅವರು ಇದ್ದಿದ್ದರೆ ಮೋದಿಯವರ ಗತಿ ಏನಾಗುತ್ತಿತ್ತೋ ಏನೊ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಒಂದು ಪ್ರತಿಮೆಗೆ ಅಷ್ಟು ದೊಡ್ಡ ಮೊತ್ತ ಖರ್ಚು ಮಾಡುವ ಬದಲು ಒಂದು ಮೆಡಿಕಲ್ ಕಾಲೇಜನ್ನು ಸ್ಥಾಪಿಸಿದ್ದರೆ ಸಾವಿರಾರು ಬಡ ಕುಟುಂಬದ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು ಎಂದು ಕನ್ಹಯ್ಯಾ ಕುಮಾರ್ ಅವರು ತಿಳಿಸಿದರು.