ಕನ್ನಡದ ನಟಿಯರು ಪರಿಭಾಷೆಯಲ್ಲಿ ನಟಿಸುತ್ತಿರೊದು ಹೊಸದೆನಲ್ಲ. ಈಗಾಗಲೇ ಕನ್ನಡದ ನಾಯಕಿಯರು ಪರಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ ಎಂದರೆ ತಪ್ಪಾಗಲಾರದು. ಇದೀಗ ಈ ಸಾಲಿಗೆ ನಟಿ ಮಿಲನಾ ನಾಗರಾಜ್ ಸೇರ್ಪಡೆಯಾಗಿದ್ದಾರೆ.
ಹೌದು, ಮಿಲನಾ ಇದೀಗ ಕಾಲಿವುಡ್ ಗೆ ಕಾಲಿಟ್ಟಿದ್ದಾರೆ. ಹಾಗಂತಾ ಈಗ ಹೆಜ್ಜೆ ಇಡುತ್ತಿಲ್ಲ. ಈಗಾಗಲೇ ‘ಟಕ್ಕು ಮುಕ್ಕು ತಿಕ್ಕು ತಾಳಂ’ ಎಂಬ ತಮಿಳು ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಈ ಚಿತ್ರವನ್ನು ಶಂಕರ್ ಬಚನ್ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ವಿಜಿತ್ ನಾಯಕನಟರಾಗಿದ್ದಾರೆ.