ಇತ್ತೀಚೆಗೆ ನಡೆದ ಯುವ ದಸರಾ ಕಾರ್ಯಕ್ರಮದ ವೇದಿಕೆಯ ಮೇಲೆ ಚಂದನ್ ಅವರು ನಿವೇದಿತಾ ಗೌಡ ಅವರ ಕೈಗೆ ಉಂಗುರವನ್ನು ತೊಡಿಸುವುದರ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು ಎಂಬ ಸುದ್ದಿ ಹರಿದಾಡಿತ್ತು. ಇನ್ನು ಈ ಸುದ್ದಿಯನ್ನು ತಳ್ಳಿ ಹಾಕಿದ ಜೋಡಿ ನಾವು ನಿಶ್ಚಿತಾರ್ಥ ಮಾಡಿಕೊಂಡಿಲ್ಲ ಬದಲಾಗಿ ಪ್ರೇಮ ನಿವೇದನೆ ಮಾಡಿದೆವು ಅಷ್ಟೆ ಎಂದು ಹೇಳಿದ್ದರು. ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಉಂಗುರವನ್ನು ಬದಲಾಯಿಸಿಕೊಂಡರೆ ನಿಶ್ಚಿತಾರ್ಥ ಎಂಬ ಅರ್ಥ ಬರುತ್ತದೆ ಹೀಗಾಗಿ ವೇದಿಕೆಯ ಮೇಲೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ನಿಶ್ಚಿತಾರ್ಥ ನಡೆಯಿತು ಎಂದೇ ಎಲ್ಲರೂ ಭಾವಿಸಿದ್ದರು.
ಇನ್ನು ಈ ವಿಷಯದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇಂದು ಈ ಜೋಡಿ ಬ್ರೇಕ್ ಹಾಕಿದ್ದು ಕುಟುಂಬ ಸಮ್ಮುಖದಲ್ಲಿ ಒಪ್ಪಿಗೆ ಪಡೆದುಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದೆ. ಹೌದು ಇಂದು ಎರಡೂ ಕುಟುಂಬಗಳ ಸಮ್ಮುಖದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಎಂಗೇಜ್ಮೆಂಟ್ ಮೈಸೂರಿನ ಫೈವ್ ಸ್ಟಾರ್ ಹೋಟೆಲ್ ವೊಂದರಲ್ಲಿ ನಡೆಯಿತು.