ಕೆಲವೊಮ್ಮೆ ದೊಡ್ಡ ವ್ಯಕ್ತಿಗಳು ತುಂಬಾ ತಲೆ ಓಡಿಸಿ ನೀಡುವ ಹೇಳಿಕೆಗಳು ದೊಡ್ಡ ಮಟ್ಟದ ವಿವಾದವನ್ನು ಸೃಷ್ಟಿಸಿಬಿಡುತ್ತವೆ. ಇನ್ನು ಇದೀಗ ಅಂಥದ್ದೇ ಒಂದು ವಿವಾದಾತ್ಮಕ ಹೇಳಿಕೆಯನ್ನು ಕೇರಳದ ಸಂಸದ ಕೇರಳ ಕಾಂಗ್ರೆಸ್ ಪಕ್ಷದ ಎಂಪಿ ಹಿಬಿ ಈಡನ್ ಅವರ ಧರ್ಮಪತ್ನಿ ಅನ್ನಾ ಲಿಂಡಾ ಈಡನ್ ತಮ್ಮ ಫೇಸ್ ಬುಕ್ ಪೋಸ್ಟ್ ಒಂದನ್ನು ಹಾಕುವುದರ ಮೂಲಕ ದೊಡ್ಡ ವಿವಾದವನ್ನು ಸೃಷ್ಟಿಸಿದ್ದಾರೆ. ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇವರ ಮನೆ ಸುತ್ತ ಪ್ರವಾಹದ ಭೀತಿ ಉಂಟಾಗಿದೆ.
ಇನ್ನು ಮನೆ ಸುತ್ತ ಪ್ರವಾಹದ ಭೀತಿ ಉಂಟಾದರೂ ಸಹ ಹಿಬಿ ಈಡನ್ ಅವರು ಕೇಕ್ ತಿನ್ನುತ್ತಿದ್ದಾರೆ ಈ ಫೋಟೋವನ್ನ ಸೆರೆ ಹಿಡಿದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರ ಪತ್ನಿ ಪ್ರವಾಹವಿದ್ದರೂ ಸಹ ನೆಮ್ಮದಿಯಿಂದ ಊಟ ಮಾಡಿ ಎಂದು ಹೇಳುವುದಕ್ಕೆ ಹೊರಟಿದ್ದಾರೆ. ಆದರೆ ಈ ಹೇಳಿಕೆಯನ್ನು ವಿವಾದ ಸೃಷ್ಟಿಯಾಗುವ ರೀತಿ ಫೇಸ್ ಬುಕ್ ನಲ್ಲಿ ಇವರು ಬರೆದುಕೊಂಡಿದ್ದು ಈಗ ದೊಡ್ಡ ಮಟ್ಟದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಲು ಕಾರಣವಾಗಿದೆ. ಪ್ರವಾಹಕ್ಕೆ ಹೆದರಬೇಡಿ ಎಂದು ಹೇಳುವ ಭರದಲ್ಲಿ ಹಣೆ ಬರಹ ಎನ್ನುವುದು ಅತ್ಯಾಚಾರ ವಿದ್ದಂತೆ ಅದನ್ನು ತಡೆಯಲು ಆಗದಿದ್ದರೆ ಸುಖದಿಂದ ಅನುಭವಿಸಿ ಎಂದು ಬರೆದುಕೊಂಡಿದ್ದಾರೆ.
ಒಂದು ದೊಡ್ಡ ಸ್ಥಾನಮಾನದಲ್ಲಿ ಇರುವ ಸಂಸದನ ಪತ್ನಿ ಈ ರೀತಿ ಫೇಸ್ ಬುಕ್ ನಲ್ಲಿ ಹಾಕುವುದು ಎಷ್ಟು ಸರಿ? ಅದರಲ್ಲಿಯೂ ಪ್ರವಾಹದ ಒತ್ತಡವನ್ನು ತೀರಾ ಕೆಳಮಟ್ಟದಲ್ಲಿ ಬಿಂಬಿಸಿ ಜನರಿಗೆ ಅವರು ನೀಡುವ ಸಂದೇಶವಾದರೂ ಏನು ಎಂದು ಸಾಮಾನ್ಯ ಜನರು ಹಿಬಿ ಈಡನ್ ಅವರ ಪತ್ನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.