ಸ್ಯಾಂಡಲ್ ವುಡ್ ಸ್ಟಾರ್ ನಟರು ಗಳಿಗೆ ಅಪಾರವಾದ ಅಭಿಮಾನಿ ಬಳಗ ಇರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ. ಅವರ ನೆಚ್ಚಿನ ನಟರ ಬಗ್ಗೆ ಮಾತನಾಡಿದರೆ ಸಾಕು ಪಿತ್ತ ನೆತ್ತಿಗೆ ಏರಿ ಯಾರು ಮಾತನಾಡುತ್ತಾರೋ ಅವರ ವಿರುದ್ಧ ಕಿಡಿಕಾರುತ್ತಾರೆ. ಇದೀಗ ಯಶ್ ಅಭಿಮಾನಿಗಳು ಸಹ ಸ್ಟಾಂಡಪ್ ಕಾಮಿಡಿಯನ್ ಒಬ್ಬರ ವಿರುದ್ಧ ತಿರುಗಿ ಬಿದ್ದಿದ್ದು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅವಮಾನ ಆಗಿದೆ ಎಂದು ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಿದ್ದಾರೆ.
ಸುದರ್ಶನ್ ರಂಗಪ್ರಸಾದ್ ಎಂಬ ಸ್ಟಾಂಡಪ್ ಕಾಮಿಡಿಯನ್ ಯೂಟ್ಯೂಬ್ ನ ಲಾಲ್ ಬಾಗ್ ಎಂಬ ಚಾನೆಲ್ ಮುಖಾಂತರ ಕಾಲೇಜು ಕೆಲಸ ಇತ್ಯಾದಿ ಎಂಬ ಸ್ಟೇಜ್ ಕಾಮಿಡಿ ವಿಡಿಯೊ ಅಪ್ಲೋಡ್ ಮಾಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಬಿಲ್ಡಪ್ ನೀಡುವ ರೀತಿ ಕಾಲೇಜಿನಲ್ಲಿ ಎಲ್ಲರೂ ಬಿಲ್ಡಪ್ ನೀಡುತ್ತಿದ್ದರು ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಇದನ್ನೇ ಆಧಾರವಾಗಿಟ್ಟುಕೊಂಡಿರುವ ಯಶ್ ಅಭಿಮಾನಿ ಬಳಗ ಇದೀಗ ಸುದರ್ಶನ್ ಅವರ ವಿರುದ್ಧ ತಿರುಗಿ ಬಿದ್ದಿದ್ದು ಯಶ್ ಅವರಿಗೆ ಅವಮಾನ ಆಗಿದೆ ಎಂದು ಅವಾಚ್ಯ ಸಂದೇಶಗಳನ್ನು ಸುದರ್ಶನ್ ಅವರಿಗೆ ಕಳುಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಜೀವ ಬೆದರಿಕೆಯನ್ನು ಸಹ ಹಾಕುತ್ತಿದ್ದಾರೆ ಎಂದು ಸ್ವತಃ ಸುದರ್ಶನ್ ಅವರೇ ತಮ್ಮ ಫೇಸ್ ಬುಕ್ ಖಾತೆಯ ಮುಖಾಂತರ ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.