ಹಾಸನ ಮೂಲದ ಮೂವರು ಯುವಕರು ಜೊತೆಗೂಡಿ ಬೌನ್ಸ್ ಎಂಬ ಆನ್ಲೈನ್ ಬೈಕ್ ರೆಂಟಲ್ ಅಪ್ಲಿಕೇಷನ್ ಅನ್ನು ಸ್ಟಾರ್ಟ್ ಮಾಡಿ ಕಡಿಮೆ ದರದಲ್ಲಿ ಬಾಡಿಗೆಗೆ ಬೈಕ್ ನೀಡುವ ಸೌಕರ್ಯವನ್ನು ಒದಗಿಸಿದ್ದಾರೆ.ಇನ್ನು ಇದರಿಂದ ಬೆಂಗಳೂರು ಮತ್ತು ಇತರ ನಗರದ ಜನರು ಉಪಯೋಗ ಪಡೆದುಕೊಂಡು ಪ್ರತಿನಿತ್ಯದ ಕೆಲಸಕ್ಕೆ ಸಹಾಯ ಪಡೆದುಕೊಳ್ಳುತ್ತಿದ್ದರು. ಇಷ್ಟೆಲ್ಲಾ ಉಪಯೋಗ ಇರುವ ಬೌನ್ಸ್ ಕಂಪನಿಗೆ ಇದೀಗ ಕೆಲ ನೀಚ ಕೆಲಸ ತಲೆನೋವಾಗಿ ಪರಿಣಮಿಸಿದೆ. ಹೌದು ಬಾಡಿಗೆಗೆ ಬೌನ್ಸ್ ಬೈಕ್ ಗಳನ್ನು ಪಡೆದು ಅದನ್ನು ತಮಗೆ ಇಚ್ಛೆ ಬಂದ ರೀತಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಕೆಲ ಕಿಡಿಗೇಡಿಗಳು ಬೌನ್ಸ್ ಸ್ಕೂಟರ್ಗಳನ್ನು ಚರಂಡಿ ಒಳಕ್ಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನ ಬೇಗೂರು ರಸ್ತೆಯ ಮೈಲಸಂದ್ರ ಬಳಿ ಈ ಘಟನೆ ನಡೆದಿದ್ದು ಚರಂಡಿ ಒಳಗಡೆ ಬೌನ್ಸ್ ಸ್ಕೂಟರ್ಗಳನ್ನು ಕಿಡಿಗೇಡಿಗಳು ಮುಳುಗಿಸಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಜನರಿಗೆ ಸೌಕರ್ಯ ಆಗಲಿ ಅಂತ ಕಡಿಮೆ ದರದಲ್ಲಿ ಬೈಕ್ಗಳನ್ನು ನೀಡುವ ಬೌನ್ಸ್ ಕಂಪನಿಗೆ ನಮ್ಮ ಜನ ನೀಡುತ್ತಿರುವ ಪ್ರತ್ಯುತ್ತರ ನೋಡಿದರೆ ಪ್ರಯತ್ನಕ್ಕೆ ಇಲ್ಲಿ ಬೆಲೆ ಇಲ್ಲ ಅನಿಸದೇ ಇರಲಾರದು.