ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಈ ಎರಡು ಆನ್ಲೈನ್ ಶಾಪಿಂಗ್ ತಾಣಗಳು ಭಾರತದಾದ್ಯಂತ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿದ್ದು ಅಪಾರವಾದ ಯೂಸರ್ ಗಳನ್ನು ಹೊಂದಿದೆ. ಯಾವುದೇ ವಸ್ತುವಾದರೂ ಸರಿ ಆನ್ಲೈನ್ ಮುಖಾಂತರ ಒದಗಿಸುವ ವ್ಯವಸ್ಥೆಯನ್ನು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಮಾಡುತ್ತಿವೆ. ಹೀಗೆ ತನ್ನ ಸೇವೆಯನ್ನು ಮಾಡುತ್ತಿರುವ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳಿಗೆ ದೆಹಲಿಯ ಮಾಡರ್ನ್ ಶಾಲೆಯ ವಿದ್ಯಾರ್ಥಿ ಆದಿತ್ಯ ದುಬೆ ಎಂಬ 16 ವರ್ಷದ ಬಾಲಕ ಚಳಿ ಬಿಡಿಸುವಂತಹ ಕೇಸ್ ಹಾಕಿದ್ದಾನೆ.
ಹೌದು ಆದಿತ್ಯ ದುಬೆ ಎಂಬ ವಿದ್ಯಾರ್ಥಿ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳ ವಿರುದ್ಧ ಏಕ ಬಾರಿ ಬಳಸುವ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ದೂರು ಸಲ್ಲಿಸಿದ್ದಾನೆ. ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ವಸ್ತು ಮಾರಾಟ ಸೇವೆಯನ್ನು ಮಾಡುತ್ತವೆ ಸರಿ ಆದರೆ ಆ ವಸ್ತುಗಳನ್ನು ಸರಬರಾಜು ಮಾಡಲು ಬಳಸುತ್ತಿರುವ ಅಂದರೆ ಡೆಲಿವರಿ ಬ್ಯಾಗ್ ಮತ್ತು ವಸ್ತುಗಳ ಸುತ್ತ ಇರುವ ಗುಳ್ಳೆಯ ಪ್ಲಾಸ್ಟಿಕ್ ಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತಿದ್ದು ಇದರಿಂದ ಪರಿಸರ ಮಾಲಿನ್ಯ ಆಗುತ್ತಿದೆ. ಹೀಗಾಗಿ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳಿಗೆ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಆದೇಶ ಹೊರಡಿಸಿ ಎಂದು ಆಗ್ರಹ ಮಾಡಿದ್ದಾನೆ.