ತನ್ನ ಕೆಲವು ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ವೀರಪ್ಪನ್ ಅದೊಂದು ದಿನ ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ. ಈ ಘಟನೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಭಿಮಾನಿಗಳು ಉದ್ರೇಕಗೊಂಡಿದ್ದರು. ಮುಂದೊಂದು ದಿನ ನೂರ ಎಂಟು ದಿನಗಳ ಅಜ್ಞಾತವಾಸ ಮುಗಿಸಿ ರಾಜ್ಕುಮಾರ್ ಬಿಡುಗಡೆಯಾಗಿಯೂ ಬಂದರು. ಡಾ. ರಾಜ್ ಕುಮಾರ್ ಕಾಡಿನಲ್ಲಿದ್ದ ನೂರೆಂಟು ದಿನಗಳಲ್ಲಿ ವೀರಪ್ಪನ್ ಒಳಗಿದ್ದ ಮನುಷ್ಯತ್ವವನ್ನು ಬಡಿದೆಬ್ಬಿಸಿದ್ದರು. ಅವನಿಗೆ ಬದುಕಿನ ಮೌಲ್ಯಗಳ ಪಾಠ ಹೇಳಿದರು. ಅಲ್ಲಿದ್ದಷ್ಟು ದಿನ ಅವರು ನಿಷ್ಟಾವಂತ ಮೇಷ್ಟ್ರಾಗಿದ್ದರು. ವೀರಪ್ಪನ್ ವಿಧೇಯ ವಿದ್ಯಾರ್ಥಿಯಾಗಿದ್ದ. ಅಲ್ಲಿದ್ದಾಗಲು ರಾಜ್ ಕುಮಾರ್ ಬೆಳಿಗ್ಗೆ ಬೇಗ ಎದ್ದು ಯೋಗ ಮಾಡುತ್ತಿದ್ದರು. ಸೂರ್ಯ ನಮಸ್ಕಾರ ಮಾಡುತ್ತಿದ್ದರು. ಅವರ ದಿನಚರಿಗಳಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಇವೆಲ್ಲವನ್ನು ಗಮನಿಸುತ್ತಿದ್ದ ವೀರಪ್ಪನ್ ಒಂದು ದಿನ ಕಣ್ತುಂಬಿ, `ನಾನೆಂಥಾ ಕೆಲಸ ಮಾಡಿಬಿಟ್ಟೇ, ದೇವರನ್ನು ಅಪಹರಿಸಿ ತಂದೇನಲ್ಲ, ನನ್ನ ಎಲ್ಲಾ ಪಾಪಗಳಿಗೆ ಪ್ರಾಯಶಃ ಕ್ಷಮೆಯಿರಬಹುದೇನೋ, ಈ ಪಾಪಕ್ಕೆ ಮಾತ್ರ ಕ್ಷಮೆಯಿಲ್ಲ’ ಎಂದು ಹೇಳಿದ್ದನಂತೆ. ಕಾಕಾತಾಳೀಯವೆಂಬಂತೆ ಕೆಲ ದಶಕಗಳ ಕಾಲ ಕಾಡಿನಲ್ಲಿ ಕುಂತು ಎರಡು ರಾಜ್ಯಗಳಿಗೆ ತಲೆನೋವಾಗಿದ್ದ ವೀರಪ್ಪನ್, ರಾಜ್ ಕುಮಾರ್ ಅವರನ್ನು ಅಪಹರಿಸಿದ ನಂತರ ಎನ್ ಕೌಂಟರ್ ಗೆ ಬಲಿಯಾಗಿದ್ದ. read full story
POPULAR STORIES :
ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?
`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?
ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?
ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’
ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?
ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!