ಉಪ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ವಾದ ವಿವಾದಗಳು ಶುರುವಾಗಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವ್ಯಕ್ತಿಗಳು ಪರಸ್ಪರ ಆರೋಪಗಳನ್ನು ಮಾಡಿಕೊಂಡು ತಮ್ಮನ್ನು ತಾವು ಹೊಗಳಿಕೊಳ್ಳುವುದು ಕಾಮನ್. ಇನ್ನು ಇದೀಗ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಈ ಕುರಿತಾಗಿ ಮಾತನಾಡಿದ್ದು , ಡಿಕೆ ಶಿವಕುಮಾರ್ ಅವರು ಹುಲಿ ಆದರೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನು ಸಹ ಬಂಡೆ ಇದ್ದಂತೆ ಎಂದು ಹೇಳಿದ್ದಾರೆ.
ಹೌದು ಮಾಧ್ಯಮದವರು ಡಿಕೆ ಶಿವಕುಮಾರ್ ಅವರನ್ನು ಹೂಳಿಗೆ ಹೋಲಿಸಿ ಸುದ್ದಿಗಳನ್ನು ಮತ್ತು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ , ಆದರೆ ಬಿಜೆಪಿಯ ಪ್ರತಿಯೊಬ್ಬರೂ ಸಹ ಬಂಡೆಗಳಿದ್ದ ನಮ್ಮ ಜೊತೆ ಯಡಿಯೂರಪ್ಪನವರ ದೊಡ್ಡ ಶಕ್ತಿ ಇರುವವರೆಗೂ ನಮ್ಮನ್ನು ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಬಾರಿಯ ಉಪ ಚುನಾವಣೆಯಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ಈ ಮೂಲಕ ರೇಣುಕಾಚಾರ್ಯ ಅವರು ತಿಳಿಸಿದರು.