ಭಾರತದಾದ್ಯಂತ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಮತ್ತು ಸಂತೋಷದಿಂದ ಆಚರಣೆ ಮಾಡಲಾಗುತ್ತದೆ. ಕತ್ತಲಿನಿಂದ ಬೆಳಕಿನೆಡೆಗೆ ಜೀವನವನ್ನು ಸಾಗಿಸಲಿ ಎಂಬರ್ಥ ಕೊಡುವ ದೀಪಾವಳಿ ಹಬ್ಬ ಎಲ್ಲರ ಬಾಳಲ್ಲಿ ಬೆಳಕು ತರಲಿ ಎಂದು ಆಚರಣೆಯನ್ನು ಮಾಡುತ್ತಾರೆ. ಭಾರತದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಗೆ ಸಹ ಸ್ಥಾನವನ್ನು ಪಡೆದುಕೊಂಡಿದ್ದು ಪ್ರತಿ ರಾಜ್ಯದ ಜನ ಸಹ ಇದನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಇನ್ನು ಈ ದೀಪಾವಳಿ ಹಬ್ಬಕ್ಕೆ ಇಂಗ್ಲೆಂಡ್ ನ ಆರ್ಸೆನಲ್ ಫುಟ್ಬಾಲ್ ಕ್ಲಬ್ ತನ್ನ ಫೇಸ್‌ಬುಕ್ ಪೇಜ್ ನ ಮೂಲಕ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿದೆ. ಇನ್ನು ಭಾರತದಾದ್ಯಂತ ಹಲವಾರು ಭಾಷೆಗಳು ಇದ್ದರೂ ಸಹ ಭಾರತೀಯರಿಗೆ “ದೀಪಾವಳಿ ಹಬ್ಬದ ಶುಭಾಶಯಗಳು” ಎಂದು ಕನ್ನಡದಲ್ಲಿಯೇ ಶುಭಾಶಯವನ್ನು ಅರ್ಸೆನಲ್ ಕೋರಿದೆ. ಇನ್ನು ಫೇಸ್ ಬುಕ್ ನಲ್ಲಿ ಹಾಕಲಾಗಿರುವ ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗಿದ್ದು ಕನ್ನಡಿಗರ ಮೆಚ್ಚುಗೆಗೆ ಮತ್ತು ಹೆಮ್ಮೆಗೆ ಪಾತ್ರವಾಗಿದೆ.