ಓಂ ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ಬ್ಲಾಕ್ ಬಸ್ಟರ್ ಚಿತ್ರ. ಎಷ್ಟೇ ಸಿನಿಮಾಗಳು ಬಂದರೂ ಸಹ ಓಂ ಚಿತ್ರದ ಕ್ರೇಜ್ ಅನ್ನು ಮುಟ್ಟಲು ಅಸಾಧ್ಯ. ಅನೇಕ ಬಾರಿ ಮರು ಬಿಡುಗಡೆ ಕಂಡಿರುವ ಓಂ ಚಿತ್ರ ಇಂದಿಗೂ ಸಹ ಆಗಾಗ ಮರು ಬಿಡುಗಡೆ ಕಾಣುತ್ತಲೇ ಇರುತ್ತದೆ. ಶಿವಣ್ಣ ಮತ್ತು ಪ್ರೇಮಾ ಜೊತೆಯಾಗಿ ನಟಿಸಿದ್ದ ಓಂ ಚಿತ್ರ ಇಂದಿಗೂ ಸಹ ಫೇವರಿಟ್. ಆ ಕಾಲಕ್ಕೆ ರೌಡಿಸಂ ಚಿತ್ರ ಮಾಡಿ ಉಪೇಂದ್ರ ಗೆದ್ದಿದ್ದರು, ಶಿವಣ್ಣ ಲಾಂಗ್ ಹಿಡಿದು ಮಿಂಚಿದ್ದರು , ಪ್ರೇಮ ಅವರು ತಮ್ಮ ಬೋಲ್ಡ್ ಅಭಿನಯದಿಂದ ಆಗಿನ ಕಾಲಕ್ಕೆ ಫೇವರೆಟ್ ನಟಿ ಆದರು.
ಈ ಚಿತ್ರ ನಟಿ ಪ್ರೇಮಾ ಅವರಿಗೆ ನೇಮ್ ಫೇಮ್ ಸ್ಟಾರ್ ಗಿರಿ ಎಲ್ಲವನ್ನೂ ಒಮ್ಮೆಲೇ ತಂದುಕೊಟ್ಟಿತು. ಇಷ್ಟೆಲ್ಲಾ ಹೆಸರು ತಂದುಕೊಟ್ಟ ಓಂ ಚಿತ್ರದಲ್ಲಿ ಪ್ರೇಮ ಅವರಿಗೆ ಅಭಿನಯಿಸ ಎಂದು ಕಟ್ಟುನಿಟ್ಟಾಗಿ ಒಬ್ಬರು ಆರ್ಡರ್ ಮಾಡಿದ್ದರಂತೆ. ಹೌದು ಸಿನಿಮಾದಲ್ಲಿ ಅಭಿನಯಿಸುವುದು ಬೇಡ ಎಂದು ಪ್ರೇಮಾ ಅವರ ಮನೆಯಿಂದಲೇ ಆದೇಶ ಬಂದಿತ್ತಂತೆ ಈ ಕಾರಣಕ್ಕಾಗಿಯೇ ಪ್ರೇಮಾ ಅವರು ಸಿನಿಮಾದಲ್ಲಿ ನಟಿಸುವುದು ಬೇಡ ಎಂದು ನಿಷೇಧ ಮಾಡಿದ್ದು ನಿಜವಂತೆ.ಈ ರೀತಿ ಚಿತ್ರರಂಗಕ್ಕೆ ಹೋಗಬೇಡ ಎಂದು ಪ್ರೇಮಗೆ ಆದೇಶ ನೀಡಿದ್ದು ಬೇರೆ ಯಾರೂ ಅಲ್ಲ ಪ್ರೇಮ ಅವರ ತಾಯಿ ಈ ವಿಷಯವನ್ನು ಸ್ವತಃ ಪ್ರೇಮ ಅವರೇ ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.