ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಅವರ ಎರಡನೇ ಚಿತ್ರ ಪೈಲ್ವಾನ್. ಇನ್ನು ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಕೃಷ್ಣ ಅವರ ಪತ್ನಿ ಸ್ವಪ್ನ ಕೃಷ್ಣ ಅವರು ಬಂಡವಾಳ ಹೂಡಿದ್ದರು. ಇಷ್ಟು ದಿನಗಳ ಕಲಾ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದ ಸ್ವಪ್ನಾ ಕೃಷ್ಣ ಅವರು ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ನಿರ್ಮಾಪಕಿಯಾಗಿದ್ದರು. ಇನ್ನು ಎಲ್ಲಾ ಅಂದುಕೊಂಡಂತೆ ಆಗಲಿಲ್ಲ ಪೈಲ್ವಾನ್ ಚಿತ್ರ ಇನ್ನೇನು ತೆರೆಗೆ ಬರಬೇಕು ಎನ್ನುವಷ್ಟರಲ್ಲಿ ಸ್ವಪ್ನಾ ಕೃಷ್ಣ ಅವರಿಗೆ ಹಣದ ಅಭಾವ ಉಂಟಾಗಿತ್ತು.
ಹೌದು ಸ್ವಪ್ನ ಕೃಷ್ಣ ಅವರಿಗೆ ಕೋಟಿ ಕೋಟಿ ಮೊತ್ತ ಬೇಕಾದಂತಹ ಸಂದರ್ಭ ಎದುರಾಗಿತ್ತು. ಈ ವೇಳೆ ಸ್ವಪ್ನಾ ಕೃಷ್ಣ ಅವರಿಗೆ ಅಗತ್ಯವಿದ್ದ ಹಣವನ್ನು ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು ನಿಖಿಲ್ ಕುಮಾರಸ್ವಾಮಿ ಅವರು. ಹೌದು ಈ ವಿಷಯವನ್ನು ಸ್ವತಃ ಸ್ವಪ್ನಾ ಕೃಷ್ಣ ಅವರೇ ಪೈಲಾನ್ 50 ದಿನದ ಸಂಭ್ರಮಾಚರಣೆಯಲ್ಲಿ ಹೇಳಿಕೊಂಡಿದ್ದಾರೆ.