“ನಾನು ಈ ಮಟ್ಟಕ್ಕೆ ಬೆಳೆಯುತ್ತೇನೆ, ಇಡೀ ಜಗತ್ತೇ ನನ್ನ ಕೊಂಡಾಡುತ್ತೆ..”! ಅಂತ ಸ್ವತಃ ಆ ಹುಡುಗನಿಗೂ ಗೊತ್ತಿರಲಿಲ್ಲ! ಗೊತ್ತಾಗುವುದಿರಲಿ ಅಂತಹ ಕನಸನ್ನೂ ಸಹ ಆತ ಕಂಡವನಲ್ಲ! ಆದ್ರೆ ಇವತ್ತು ಅವರೇ ಸ್ವತಃ ಅಚ್ಚರಿ ಪಡುವಂತೆ ಬೆಳೆದಿದ್ದಾರೆ! ಕೇವಲ ಅವರು ಬೆಳೆಯದೆ ಬೇರೆಯವರನ್ನೂ ಬೆಳೆಸುತ್ತಿದ್ದಾರೆ! ಅವರ ಲೈಫ್ ಸ್ಟೋರಿಯೇ ಒಂದು ಅದ್ಭುತ! ಅವರು ನೆಡೆದು ಬಂದ ಹಾದಿಯೇ ಒಂದು ಪವಾಡ! ಅವಕಾಶ ಸಿಕ್ಕಾಗ ಸರಿಯಾಗಿ ಬಳಸಿಕೊಂಡ್ರೆ ಏನನ್ನೂ ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಇವರೇ ಪ್ರತ್ಯಕ್ಷ ಸಾಕ್ಷಿ! ಈ ವ್ಯಕ್ತಿ ಯಾರು? ಹೇಗಿದ್ದವರು, ಈಗ ಹೇಗಾಗಿದ್ದಾರೆಂದು ಹೇಳ್ತೀನಿ ಕೇಳಿ! ನಿಮಗೇ ಅಚ್ಚರಿ ಆಗುತ್ತೆ..! ನಂಬಲು ಕಷ್ಟವಾದರೂ ನಂಬಲೇ ಬೇಕಾದ ರಿಯಲ್ ಹೀರೋನ ಸ್ಟೋರಿ ಇದು!
ಅವರ ಹೆಸರು “ರಮೇಶ್ ಬಲ್ಲಿದ್”! ಹುಟ್ಟಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ “ಕೋತಿಗುಡ್ಡ” ಎಂಬ ಪುಟ್ಟಗ್ರಾಮದಲ್ಲಿ! ತಿಮ್ಮಪ್ಪ ಬಲ್ಲಿದ್ ಬಸಮ್ಮ ದಂಪತಿಗಳ ಒಂಬತ್ತು ಮಕ್ಕಳಲ್ಲಿ ರಮೇಶ್ ಬಲ್ಲಿದ್ ಐದನೆಯವರು! ಮನೆಯಲ್ಲಿ ಕಿತ್ತು ತಿನ್ನುವ ಬಡತನ! ಕೂಲಿಯೇ ಕುಟುಂಬದ ಜೀವಾಳ! ಬಡತನ ಎಂಬ ಶಾಪದಿಂದಾಗಿ ಶಾಲೆಗೂ ಹೋಗಲಾಗಲಿಲ್ಲ! ಶಾಲೆಗೆ ಹೋಗುವ ಆ ವಯಸ್ಸಲ್ಲಿ ಶ್ರೀಮಂತರ ಮನೆಯ ಜೀತದ ಆಳಾಗಿ ಕಷ್ಟಪಡುತ್ತಾರೆ! ಅಕ್ಷರ ಜ್ಞಾನವೇ ಇಲ್ಲದ ಇವರಿಗೆ ಕೋತಿಗುಡ್ಡವೇ ಇಡೀ ಜಗತ್ತು! ಆ ಕೊಂಪೆಯಲ್ಲಿ ಅಣ್ಣವರ ಹಾಡನ್ನು ಗೊನಗುತ್ತಾ 13 ವರ್ಷಗಳಕಾಲ ಎಮ್ಮೆಕಾಯ್ತಾ ಇದ್ರು! ಶಾಲೆಗೆ ಹೋಗುವ ಮಕ್ಕಳನ್ನು ಕಂಡು ನಾನೂ ಶಾಲೆಗೆ ಹೋಗಬೇಕಿತ್ತು..! `ನನ್ನ ಅದೃಷ್ಟವೇ ಸರಿಯಿಲ್ಲ ಅಂತ ತುಂಬಾ ಸಂಕಟ ಪಡುತ್ತಿದ್ರು! ವರ್ಷ ಹದಿನೆಂಟಾದರೂ ಎಮ್ಮೆ ಕಾಯುವುದೇ ಖಾಯಂ ಕೆಲಸವಾಗಿತ್ತು !ಊರಿನ ಕೆಲವು ಮಂದಿ “ಎಮ್ಮೆ ತಿಮ್ಮ” ಅಂತ ಕರೀತಾ ಇದ್ರೆ ಅವರು ಅವರತ್ತ ಒಮ್ಮೆ ನಗುಬೀರಿ ಸುಮ್ನೆ ಮುಂದೆ ಸಾಗ್ತಾ ಇದ್ರು..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಆದ್ರೆ ಅದೊಂದು ದಿನ ಅವರ ಅದೃಷ್ಟವೇ ಬದಲಾಯಿತು..! ದೇವರು “ರಾಜೇಶ್ ಭಟ್” ಎಂಬುವವರ ರೂಪದಲ್ಲಿ ಈ ರಮೇಶ್ ಪಾಲಿಗೆ ಬಂದಿದ್ದ! ತನ್ನ ತಂದೆಗೆ ಊಟ ತೆಗೆದುಕೊಂಡು ಮನೆಯಿಂದ ಹೊರಟಿದ್ದ ರಮೇಶ್ ಬಲ್ಲಿದ್ ನನ್ನು ಕಂಡು “ಹೇ ಎಮ್ಮೆ ತಿಮ್ಮ” ನಮ್ ಊರಿಗೆ ಯಾರೋ ಓದಿದವರು ಬಂದಿದ್ದಾರೆ..! ನೀನು ಅವರ ಬಳಿ ಹೋಗೋ..! ನಿನಗೆ ಇಂಗ್ಲೀಷ್ ಹೇಳಿ ಕೊಡ್ತಾರೆ..”! ಅಂತ ಹೇಳ್ತಾರೆ! ಅವರು ವ್ಯಂಗ್ಯವಾಗಿ ಹೇಳಿದ್ದೋ ಅಥವಾ ನಿಜವಾಗಿಯೂ ರಮೇಶ್ ಗೆ ಒಳ್ಳೆಯದೇ ಆಗಲಿ ಅಂತ ಹೇಳಿದ್ದೋ ಗೊತ್ತಿಲ್ಲ..! ಆದ್ರೆ ಅದನ್ನ ತುಂಬಾ ಸೀರಿಯಸ್ ಆಗಿ ತಗೊಂಡ ರಮೇಶ್ ಇಂಗ್ಲೀಷ್ ಹೇಳಿಕೊಡಲು ಬಂದಿದ್ದ “ರಾಜೇಶ್ ಭಟ್” ಬಳಿ ಹೋಗ್ತಾರೆ! ರಾಜೇಶ್ ಭಟ್ ಮೂಲತಃ ಶಿರಸಿ ಅವರಾಗಿದ್ದು, ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ! ಹಳ್ಳಿಯ ಬಡವರನ್ನು, ಅವಿದ್ಯಾವಂತರನ್ನೂ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸ್ನೇಹಿತರಿಬ್ಬರೊಡನೆ ಹಳ್ಳಿಹಳ್ಳಿಗೆ ಹೋಗಿ ಇಂಗ್ಲೀಷ್ ಹೇಳಿಕೊಡ್ತಾರೆ! ಇದೇ ಕಾರಣಕ್ಕಾಗಿ ಕೋತಿಗುಡ್ಡ ಹಳ್ಳಿಗೂ ಹೋಗಿರ್ತಾರೆ..! ಅದೇ ಟೈಮಲ್ಲಿ ಎಮ್ಮೆ ಮೇಯಿಸ್ತಾ ಇದ್ದ ರಮೇಶ್ ಸಿಗ್ತಾರೆ..!
“ನನಗೂ ಇಂಗ್ಲೀಷ್ ಹೇಳಿ ಕೊಡಿ” ಎಂದು ರಾಜೇಶರ ಬಳಿಗೆ ಬಂದಿದ್ದ ರಮೇಶ್ ಬಲ್ಲಿದ್ ಗೆ “ಮೈ ನೇಮ್ ಈಸ್ ರಮೇಶ್”..! ಅಂತ ಹೇಳಲೂ ಬರುತ್ತಿರಲಿಲ್ವಂತೆ..! ಹೇಳಿಕೊಟ್ಟರೂ, ಅದನ್ನು ಹೇಳಲಾಗುತ್ತಿರಲಿಲ್ಲವಂತೆ..! ಆದ್ರೆ ಅವರಲ್ಲಿ ಕಲಿತೇ ಕಲಿಯುತ್ತೇನೆಂಬ ಆತ್ಮವಿಶ್ವಾಸವಿತ್ತು..! ಅವರ ಆತ್ಮವಿಶ್ವಾಸ, ಕಲಿಯಲೇ ಬೇಕೆಂಬ ಆಸೆಯನ್ನು ತಿಳಿದ ರಾಜೇಶ್ ಭಟ್, ಬಲ್ಲಿದ್ ಕುಟುಂಬದವರನ್ನು ಒಪ್ಪಿಸಿ ಬೆಂಗಳೂರಿಗೆ ಕರ್ಕೊಂಡು ಬಂದ್ರು..! ಬೆಂಗಳೂರಿಗೆ ಬಂದ ರಮೇಶ್ ಬಲ್ಲಿದ್ ಫುಲ್ ಚೇಂಜ್ ಆಗಿಯೇ ಬಿಟ್ರು!
ಬೆಂಗಳೂರಿಗೆ ಬಂದ ಕೇವಲ ಒಂದುವರೆ ತಿಂಗಳೊಳಗೆ ಇಂಗ್ಲೀಷ್ ಕರಗತ ಮಾಡಿಕೊಂಡಿದ್ರು! ಅದೂ ಎಷ್ಟರಮಟ್ಟಿಗೆ ಗೊತ್ತಾ..? ಇಂಗ್ಲೀಷರೇ ನಾಚುವಂತ ಇಂಗ್ಲೀಷ್ ಅವರದ್ದು! ರಾಜೇಶ್ ಅವರ ಬಳಿ ಇಂಗ್ಲೀಷ್ ಕಲಿತು, ಅಲ್ಲಿಯೇ ತನ್ನಂತೆ ಬಂದ ಇತರರಿಗೆ ಇಂಗ್ಲೀಷ್ ಪಾಠ ಮಾಡೋಕು ಶುರುಮಾಡಿದ್ರು!
ಮನೆಬಿಟ್ಟು ಬಂದ ಏಳು ತಿಂಗಳ ಬಳಿಕ ಅಣ್ಣನ ಮದುವೆಗೆಂದು ಕೋತಿಗುಡ್ಡಕ್ಕೆ ಹೊರಡುತ್ತಾರೆ..! ಊರಿಗೆ ಹೊರಟಿದ್ದ ರಮೇಶ್ ಗೆ ಸೂಟು ಬೂಟು ಹಾಕಿಸಿ ಕಾರಿನಲ್ಲಿ ಕಳುಹಿಸಿಕೊಡ್ತಾರೆ ಗುರು ರಾಜೇಶ್ ಭಟ್! ಕೋತಿಗುಡ್ಡದ ತನ್ನ ಮನೆ ಬಳಿ ಕಾರು ನಿಲ್ಲಿಸಿ ಇಳಿದ ರಮೇಶ್ ಬಲ್ಲಿದರನ್ನು ತಾಯೀಯೇ ಗುರುತು ಹಿಡಿಯಲ್ಲ! “ಯಾರೋ ಬ್ಯಾಂಕ್ ಆಫೀಸರ್ ಬಂದಿದ್ದಾರೆ ನೋಡು ಮಗಾ” ಅಂತ ಹಿರಿಯ ಮಗನನ್ನು ಕರೆಯುತ್ತಾರೆ! “ಅಮ್ಮಾ ನಾನು ರಮೇಸ” ಅಂದಾಗ್ಲೇ ಆ ತಾಯಿಗೆ ಗೊತ್ತಾಗಿದ್ದು, ಬಂದಿದ್ದು ಬ್ಯಾಂಕ್ ಆಫೀಸರ್ ಅಲ್ಲ ನನ್ನ ಮಗನೆಂದು!
ಹೀಗೆ ಇಂಗ್ಲೀಷ್ ಕಲಿತು ತನ್ನ ತಾಯಿಯೇ ಗುರುತು ಹಿಡಿಯದಷ್ಟು ಚೇಂಜ್ ಆಗಿದ್ದ ರಮೇಶ್ ಬಲ್ಲಿದ್ ನಂತರ ಕಂಪ್ಯೂಟರ್ ಶಿಕ್ಷಣವನ್ನೂ ಪಡೆಯುತ್ತಾರೆ! ನಿಮಿಷಕ್ಕೆ 70 ಪದಗಳನ್ನು ಟೈಪ್ ಮಾಡ್ತಾರೆ..! ಕಂಪ್ಯೂಟರ್ ಕಲಿಕೆಯಿಂದಾಗಿ ಅವರ ಇಂಗ್ಲೀಷ್ ಭಾಷಾ ಹಿಡಿತ ಇನ್ನೂ ಹೆಚ್ಚುತ್ತೆ! ನಂತರ ಒಂದು ಬಿಪಿಒ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಳ್ತಾರೆ..! ನೋಡು ನೋಡುತ್ತಿದ್ದಂತೆ ಟೀಂ ಲೀಡರ್ ಕೂಡ ಆಗ್ತಾರೆ..! ತನ್ನ ಟ್ಯಾಲೆಂಟನಿಂದ ಆ ಸಂಸ್ಥೆಯ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರೂ ಆಗ್ತಾರೆ! ಕೈ ತುಂಬಾ ಹಣ ಕೂಡ ಸಿಗುತ್ತೆ!
ಆದ್ರೆ ಇದ್ದಕ್ಕಿದ್ದ ಹಾಗೆ ಇವರಿಗೆ ತಾನೊಬ್ಬ ಬೆಳೆದರೆ ಏನೂ ಪ್ರಯೋಜನವಿಲ್ಲ ನಮ್ ಹಳ್ಳಿ ಜನರನ್ನು ಉದ್ಧರಿಸಬೇಕೆಂದು ಅನಿಸುತ್ತೆ! ತಕ್ಷಣ ಬಿಪಿಒ ಗೆ ಟಾಟ ಹೇಳಿ, ಕೆಲಸ ಬಿಟ್ಟು ಊರಿಗೆ ಮರಳಿ ಬರ್ತಾರೆ! ಹಳ್ಳಿಗೆ ಬಂದವರೇ ಯುವಕರಿಗೆ ಇಂಗ್ಲೀಷ್ ಹೇಳಿಕೊಡ್ತಾರೆ! ತನ್ನ ಗುರು ರಾಜೇಶ್ ಭಟ್ಟರ ಸಹಕಾರದಿಂದ ರಾಯಚೂರು ಜಿಲ್ಲೆಯ “ಕನಕಗಿರಿಯಲ್ಲಿ” ತಾವೇ ಒಂದು ಬಿಪಿಒ ತೆರೆಯುತ್ತಾರೆ! ತನ್ನ ಬಳಿ ಇಂಗ್ಲೀಷ್ ಕಲಿತಿದ್ದ 120 ಯುವಕರಿಗೆ ತನ್ನ ಸಂಸ್ಥೆಯಲ್ಲೇ ಕೆಲಸವನ್ನೂ ಕೊಡ್ತಾರೆ! ಅವರು ಅಂದು ತೆರೆದ ಬಿಪಿಒ ರೂರಲ್ ಎಡ್ಜ್ ಇವತ್ತು ಜಿಲ್ಲೆಯಲ್ಲಿಯೇ ಹೆಸರುವಾಸಿಯಾದ ಸಂಸ್ಥೆ!
ಇವತ್ತು ಇಂಗ್ಲೀಷ್ ಪ್ರೊಪೆಸರ್ ಆಗಬೇಕೆಂದು ಕನಸು ಕಾಣ್ತಾ ಇರೋ ಇವರಿಗೆ ಅಂದು ಕನ್ನಡವೇ ಬರುತ್ತಿರಲಿಲ್ಲ! ಇಂದು “ಷೇಕ್ಸ್ ಪಿಯರ್” ನಂತಹ ದೈತ್ಯ ಇಂಗ್ಲೀಷ್ ಸಾಹಿತಿಗಳ ಬರಹಗಳನ್ನು ಓದಿ ಅರ್ಥ ಮಾಡಿಕೊಳ್ತಾರೆ! ಮೊದಲೇ ಹೇಳಿದಂತೆ ಪ್ರೋಪೆಸರ್ ಆಗಬೇಕೆಂಬ ಆಸೆ ಅವರಿಗಿದ್ದರೂ ಇವತ್ತು ಹೆಸರಾಂತ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ..! ಬೇರೆಯವರನ್ನೂ ಬೆಳೆಸುತ್ತಿದ್ದಾರೆ! ಅನೇಕ ಸಂಘ ಸಂಸ್ಥೆಗಳು ಇವರನ್ನು ದೇಶದಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ಗೌರವಿಸಿವೆ!
ಇವೆಲ್ಲಕ್ಕಿಂತ ಮುಕೇಶ್ ಅಂಬಾನಿ ಹೆಂಡ್ತಿ ನೀತು ಅಂಬಾನಿ ರಮೇಶ್ ಬಲ್ಲಿದರನ್ನು “ರಿಯಲ್ ಹೀರೋ” ಅಂದಿದ್ದಾರೆ! ಸಚಿನ್ , ಕುಂಬ್ಳೆ, ಆಶಾ ಭೋಸ್ಲೆ ಅಂತವರೂ ಸಹ ರಮೇಶ್ ಬಲ್ಲಿದರನ್ನು ಹಾಡಿ ಹೊಗಳಿದ್ದಾರೆ! ಊರಿನಲ್ಲಿ ಎಮ್ಮೆತಿಮ್ಮಣ್ಣ ಅಂತ ಕರೀತಾ ಇದ್ದವರೂ ಸಹ ಹೆಮ್ಮೆಯಿಂದ ಬಲ್ಲಿದ್ ನಮ್ ಹುಡುಗ ಅಂತಿದ್ದಾರೆ! ನಿಜಕ್ಕೂ ಇವರ ಸಾಧನೆ ಎಲ್ಲರಿಗೂ ಸ್ಪೂರ್ತಿ! ಇವರ ಸಾಧನೆಯ ಹಿಂದಿನ ಗುರು ರಾಜೇಶ್ ಭಟ್ ಕೂಡ ಸ್ಮರಣೀಯರು..!
Real Hero Speech Video :
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
POPULAR STORIES :
ಅವಳು ದಿವ್ಯಾ ಭಾರ್ತಿ `ಶಿ ವಾಸ್ ಎಟರ್ನಲ್, ಶಿ ವಾಸ್ ವಂಡರ್ ಫಾರ್ ಎವರ್’
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..! #Match Fixing Video
ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”
ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!
ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!
ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!
ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!
ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000