ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

0
76

ದುಬೈ.. ಅಲ್ಲಿನ ಜನರೇ ಹಾಗೆ. ಅಚ್ಚರಿಗಳನ್ನು ಸೃಷ್ಟಿಸುವುದು, ಇತರರಿಗಿಂತ ಭಿನ್ನವಾಗಿ ಬದುಕುವುದು ಎಂದರೆ ದುಬೈ ದೊರೆಗಳಿಗೆ ಇಷ್ಟ ಅನ್ನಿಸುತ್ತೆ. ಅದಕ್ಕಾಗಿಯೇ ಇಡೀ ಜಗತ್ತಿನಲ್ಲಿ ಎಲ್ಲೂ ಕಾಣ ಸಿಗದ ಅಚ್ಚರಿಗಳು ದುಬೈನಲ್ಲಿ ಮಾತ್ರ ಸಿಗುತ್ತವೆ. ಬನ್ನಿ ಅಚ್ಚರಿಗಳೊಂದಿಗೆ ಒಂದು ಸುತ್ತು ಹಾಕಿ ಬರೋಣ.

1. ಏರ್ ಕಂಡೀಷನ್ ಬಸ್ ಸ್ಟಾಪ್..!

1

ನಮ್ಮೂರಲ್ಲಿ ಕೂರಲು ಸೀಟ್ ಕೂಡಾ ಇಲ್ಲದ ಬಸ್ ಸ್ಟ್ಯಾಂಡ್ ಗಳನ್ನು ನೋಡಿದ್ದೇವೆ. ಆದರೆ ದುಡ್ಡಿನ ದೊರೆಗಳನ್ನು ಹೊತ್ತು ಮೆರೆಯುತ್ತಿರುವ ದುಬೈನಲ್ಲಿ ಏರ್ ಕಂಡೀಷನ್ ಬಸ್ ನಿಲ್ದಾಣಗಳಿವೆ. ಅದರಲ್ಲಿ ಮನರಂಜನೆಗೆ ಬೇಕಾದ ಕೆಲವು ಸೌಲಭ್ಯಗಳೂ ಕೂಡಾ ಇವೆ. ಹಾಗಾದರೆ ಅಲ್ಲಿನ ಸಾರಿಗೆ ವ್ಯವಸ್ಥೆ ಇನ್ನು ಹೇಗೆ ಇರಬೇಡ..?

 

2. ಸಿಂಹದ ಮೇಲೆ ಸವಾರಿ..!

3

ನಾವು ಇಲ್ಲಿಯವರೆಗೆ ಕುದುರೆ, ಕತ್ತೆ, ಒಂಟೆ, ಆನೆಗಳ ಮೇಲೆ ಸವಾರಿ ಹೊರಡುವವರನ್ನು ನೋಡಿದ್ದೇವೆ, ಅವಕಾಶ ಸಿಕ್ಕರೆ ಸವಾರಿಯನ್ನೂ ಮಾಡಿದ್ದೇವೆ. ಆದರೆ ಈ ದುಬೈ ಮಂದಿಗೆ ಸಿಂಹದ ಮೇಲೆ ಸವಾರಿ ಮಾಡಿದರೇನೇ ಖುಷಿ. ಇಲ್ನೋಡಿ ದುಬೈ ದೊರೆಗಳ ಸಿಂಹ ಸವಾರಿ.

3. ಚಿರತೆ ಜೊತೆ ಜಾಗಿಂಗ್, ಸಿಂಹದೊಂದಿಗೆ ವಾಕಿಂಗ್..!

4

ನಾಯಿಯ ಜೊತೆಗೆ ವಾಕಿಂಗ್ ಮಾಡುವುದು ಆರೋಗ್ಯಕರ ಎನ್ನುತ್ತಾರೆ. ಆದ್ದರಿಂದ ನಮ್ಮ ಜನ ಬೆಳ್ಳಂ ಬೆಳಗ್ಗೆ ನಾಯಿಗಳೊಂದಿಗೆ ವಾಕ್ ಮಾಡುತ್ತಾರೆ. ಆದರೆ ದುಬೈನಲ್ಲಿನ ಜನರು ಸಿಂಹದ ಜೊತೆ ವಾಕಿಂಗ್ ಮಾಡಿದ್ರೆ, ಚಿರತೆಯೊಂದಿಗೆ ಸವಾರಿ ಹೊರಡುತ್ತಾರೆ. ಅದೇನೋ ಗೊತ್ತಿಲ್ಲ ಸಿಂಹ, ಚಿರತೆಗಳು ದುಬೈನಲ್ಲಿ ಸಾಧು ಪ್ರಾಣಿಗಳಂತೆ ವರ್ತಿಸುತ್ತವೆ. ಇಷ್ಟಕ್ಕೂ ಅವುಗಳ ಹೊಟ್ಟೆಗೆ ದುಡ್ಡನ್ನೇ ಹಾಕ್ತಾರೋ ಏನೋ..?!

4. ದುಬಾರಿ ವಾಹನಗಳ ನಗರಿ

7

ದುಬೈಗೆ ಕಾಲಿಟ್ಟರೆ ಸಾಮಾನ್ಯ ಕಾರುಗಳಂತೂ ಕಾಣ ಸಿಗುವುದೇ ಇಲ್ಲ. ಅಲ್ಲಿನ ರಸ್ತೆಗಳ ಮೇಲೆ ಕೋಟಿ ಮೊತ್ತದ ಕಾರುಗಳು ಓಡಾಡಿದರೇನೇ ಚೆಂದ ಅನ್ನಿಸುತ್ತೆ. ಅದಕ್ಕೆ ಪ್ರತಿಯೊಬ್ಬರೂ ಫೆರಾರಿ, ರೋಲ್ಸ್ ರಾಯ್ಸ್, ಬುಗಾಟಿ, ಆಸ್ಟಿನ್ ಮಾರ್ಟಿನ್ ಕಾರುಗಳಲ್ಲೇ ಓಡಾಡುತ್ತಾರೆ. ಅಲ್ಲದೇ ಕಾರುಗಳಿಗೆ ಬಂಗಾರದ ಲೇಪನ ಮಾಡಿಸಿ, ಗೋಲ್ಡನ್ ಕಾರ್ನಲ್ಲಿ ಓಡಾಡುತ್ತಾರೆ. ಎಷ್ಟೇ ಆಗಲಿ ದುಡ್ಡಿನ ದೊರೆಗಳ ಊರಲ್ಲವೇ..?

5. ಪೊಲೀಸರಿಗೆ ಐಶಾರಾಮಿ ಫೇಸಿಲಿಟಿ..!

5

ದುಬೈನ ದೊರೆಗಳು ಮಾತ್ರವಲ್ಲ. ಅಲ್ಲಿನ ಪೊಲೀಸರೂ ಕೂಡಾ ಲಂಬೋರ್ ಗಿನಿಯಂತಹ ಐಶಾರಾಮಿ ಕಾರುಗಳಲ್ಲೇ ಸಂಚರಿಸುವುದು. ಇಷ್ಟಕ್ಕೂ ದುಬೈನ ಪೊಲೀಸರಿಗೆ ಹೆಚ್ಚಿನ ಕೆಲಸವೇ ಇರುವುದಿಲ್ಲ. ಏಕೆಂದರೆ ಅಲ್ಲಿ ತಪ್ಪು ಮಾಡಿದರೆ ಕಠಿಣ ಶಿಕ್ಷೆಗಳಿವೆ. ಆದ್ದರಿಂದ ದುಬೈನಲ್ಲಿ ಅಪರಾಧ ಪ್ರಕರಣಗಳು ಅತಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತವೆ. ಆದರೂ ಅಲ್ಲಿನ ಪೊಲೀಸರು ಐಶಾರಾಮಿ ಜೀವನ ನಡೆಸುತ್ತಿದ್ದಾರೆ.

6

ನಮ್ಮಲ್ಲಿ ಎಟಿಎಂ ಮಷಿನ್ಗಳು ಇರುವಂತೆ ದುಬೈನಲ್ಲಿ ಗೋಲ್ಡನ್ ಮಷಿನ್ಗಳಿವೆ. ಕಾರ್ಡ್ ಹಾಕಿದರೆ ನಮ್ಮಲ್ಲಿ ಹಣ ಬರುತ್ತದೆ. ಆದರೆ ಅಲ್ಲಿ ಬಂಗಾರ ಬರುತ್ತದೆ ಅಷ್ಟೇ..! ಇಷ್ಟಕ್ಕೂ ಅಲ್ಲಿ ನೀವು ಚಿನ್ನ ತಗೊಳ್ಳಬೇಕು ಅಂದ್ರೆ ನಿಮ್ಮ ಜೇಬು ಕೂಡಾ ಭಾರವಾಗಿರಲೇಬೇಕು.

7 .ಟ್ರಾಫಿಕ್ಕಾ..? ಆಕಾಶದಲ್ಲಿ ಹಾರಾಡಿ

8

ನಮ್ಮೂರಲ್ಲಿ ಟ್ರಾಫಿಕ್ ಸಮಸ್ಯೆ ಎದುರಾದರೆ ತಾಸುಗಟ್ಟಲೆ ಕಾಯಲೇಬೇಕು. ಆದರೆ ದುಬೈನಲ್ಲಿ ಹಾಗಿಲ್ಲ. ಟ್ರಾಫಿಕ್ ಸಮಸ್ಯೆ ಉದ್ಭವಿಸಿದರೆ, ಹೆಲಿಕಾಪ್ಟರ್ ಮೂಲಕ ಕಾರನ್ನು ಆಕಾಶದಲ್ಲಿ ಹೊತ್ತೊಯ್ದುಬಿಡುತ್ತಾರೆ. ಆಗ ಟ್ರಾಫಿಕ್ ಸಮಸ್ಯೆಯೇ ಇರುವುದಿಲ್ಲ.

8. ಆಕಾಶದಲ್ಲಿ ಆಟವಾಡಿ

9

ದುಬೈನಲ್ಲಿ ಸಾಮಾನ್ಯವಾಗಿ ಮುಗಿಲೆತ್ತರದ ಕಟ್ಟಡಗಳೇ ಕಾಣಸಿಗುತ್ತವೆ. ಅಲ್ಲದೇ ಅದರ ಮೇಲೊಂದು ಟೆನಿಸ್ ಕೋರ್ಟ್ ನಿರ್ಮಿಸಿರುತ್ತಾರೆ. ಅಲ್ಲೇ ಟೆನ್ನಿಸ್ ಆಡುತ್ತಾರೆ. `ಆಟವಾಡುವಾಗ ಬಾಲ್ ಕೆಳಗೆ ಬಿದ್ದರೆ ಏನು ಮಾಡುವುದು ಅಂತ ತಲೆ ಕೆರೆದುಕೊಳ್ಳಬೇಡಿ. ಬಾಲ್ ಕೆಳಗೆ ಬಿದ್ದರೆ ಹೊಸ ಬಾಲ್ ತಗೋತಾರೆ ಅಷ್ಟೇ..!

9. ಶಾಪಿಂಗ್ ಮಾಲ್ ನಲ್ಲೊಂದು ಆಟ

1013

ನಮ್ಮ ಶಾಪಿಂಗ್ ಮಾಲ್ ಗಳಲ್ಲಿ ನೋಡಲು, ಆಡಲು ಏನೂ ಇರುವುದಿಲ್ಲ. ಆದರೆ ದುಬೈನ ಶಾಪಿಂಗ್ ಮಾಲ್ ಗಳಲ್ಲಿ ಐಸ್ ಆಟಗಳನ್ನು ಆಡಬಹುದು. ಮರಳುಗಾಡಿನ ಬಿಸಿಲೊಳಗೆ ಬೇಯುವ ದುಬೈನಲ್ಲಿ ತಂಪನ್ನೊದಗಿಸುವ ಕ್ರೀಡೆಗೆ ಬಲು ಬೇಡಿಕೆ ಇದೆಯಂತೆ.

10. ಒಂಟೆ ರೇಸ್ ನೋಡಿದ್ರಾ..?

11

 

ದುಬೈನಲ್ಲಿ ಒಂಟೆ ರೇಸ್ ಭಾರೀ ಫೇಮಸ್. ಒಂಟೆಗಳನ್ನು ಓಡಿಸುವುದು ರೋಬೋಟ್ಗಳು ಎಂದರೆ ನೀವು ನಂಬಲೇಬೇಕು. ಆ ರೋಬೋಗಳು ಹೊರಡಿಸುವ ಶಬ್ದಕ್ಕೆ ಬೆದರುವ ಒಂಟೆಗಳು ವೇಗವಾಗಿ ಓಡುತ್ತವೆ ಎಂಬುದು ದುಬೈ ದೊರೆಗಳ ಆಂಬೋಣ. ಆ ರೇಸ್ನಲ್ಲಿ ಗೆಲ್ಲುವ ಒಂಟೆಯ ಯಜಮಾನನಿಗೆ ಭರ್ಜರಿ ಬಹುಮಾನವೂ ದೊರೆಯುತ್ತದೆ. ಆದರೆ ರೋಬೋಗಳಿಗೆ..?

11. ಫ್ಯಾನ್ಸಿ ಕಾರಿನಲ್ಲಿ ಬರುತ್ತೆ ಪಾರ್ಸಲ್

14

ನಾವು ಆನ್ ಲೈನ್ ನಲ್ಲಿ ಪಿಜ್ಜಾ ಆರ್ಡರ್ ಮಾಡಿದರೆ, ಯಾವುದೋ ಒಂದು ಬೈಕ್ ನಲ್ಲಿ ಬರುವ ವ್ಯಕ್ತಿ ಪಿಜ್ಜಾ ಕೈಗಿತ್ತು ಹೋಗುತ್ತಾನೆ. ಆದರೆ ದುಬೈನಲ್ಲಿ ಹಾಗಾಗಲಿಕ್ಕಿಲ್ಲ. ಏಕೆಂದರೆ ಅಲ್ಲಿ ಡೆಲಿವರಿ ಬಾಯ್ ಗಳು ಬಳಸುವುದು ಫ್ಯಾನ್ಸಿ ಕಾರ್ ಗಳನ್ನು. ಹಾಗಾಗಿ ಕ್ಷಣಾರ್ಧದಲ್ಲಿ ನಿಮಗೆ ಬೇಕಾದ ಪಿಜ್ಜಾ ನಿಮ್ಮ ಕೈಸೇರುತ್ತದೆ.

12. ಕೃತಕ ಐಲ್ಯಾಂಡ್ನಲ್ಲೊಂದು ಸುತ್ತು ಹಾಕಿ

1385869_655990747778706_675458442_n

ದುಬೈ ಚಿಕ್ಕದಾಗಿದ್ದು, ಅಲ್ಲಿನ ದೊರೆಗಳಿಗೆ ಸ್ಥಳಾವಕಾಶದ ತೊಂಧರೆ ಇದ್ದಂತಿದೆ. ಆದ್ದರಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೃತಕ ಐಲ್ಯಾಂಡ್ ನಿರ್ಮಿಸಿದ್ದಾರೆ. ಅದೂ ವಿಭಿನ್ನ ಸ್ವರೂಪದಲ್ಲಿದ್ದು ಪ್ರಪಂಚದಲ್ಲೆಲ್ಲೂ ಅಂಥಹ ಐಲ್ಯಾಂಡ್ ನಿರ್ಮಾಣವಾದ ಉದಾಹರಣೆ ಇಲ್ಲವಂತೆ.

  • ರಾಜಶೇಖರ ಜೆ

—————

POPULAR  STORIES :

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here