ನಿನ್ನೆ ತೆಲಂಗಾಣದ ಅಬ್ದುಲ್ಲಾಪುರ ಮೆಟ್ ನಲ್ಲಿ ತಹಸೀಲ್ದಾರ್ ಕಚೇರಿಗೆ ನುಗ್ಗಿ ವಿಜಯಾ ನಾಯ್ಡು ಎಂಬ ತಹಸೀಲ್ದಾರ್ ಅನ್ನು ಹಾಡು ಹಗಲೇ ಬೆಂಕಿ ಹಚ್ಚಿ ಸಾಯಿಸಲಾಯಿತು. ಹೌದು ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ಗೆ ಹಾಡುಹಗಲೇ ಕಚೇರಿಗೆ ನುಗ್ಗಿ ಬೆಂಕಿ ಹಚ್ಚಿದ ಘಟನೆ ನಿನ್ನೆ ನಡೆಯಿತು. ಇನ್ನು ತಹಸೀಲ್ದಾರ್ ವಿಜಯ ನಾಯ್ಡು ಅವರನ್ನು ಬೆಂಕಿಯಿಂದ ರಕ್ಷಿಸಲು ಚಾಲಕ ಗುರುನಾಥಮ್ ಅವರು ಹರಸಾಹಸ ಪಟ್ಟಿದ್ದರು.
ದುರದೃಷ್ಟ ಏನೆಂದರೆ ಬೆಂಕಿಯಿಂದ ರಕ್ಷಿಸಲು ಹೋಗಿದ್ದ ಗುರುನಾಥಮ್ ಅವರು ಸಹ ಬೆಂಕಿಗೆ ಆಹುತಿಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು ಗುರುನಾಥಮ್ ಕುಟುಂಬದ ಸ್ಥಿತಿ ತುಂಬಾ ಕಷ್ಟಕರವಾಗಿದ್ದು ಗುರುನಾಥಮ್ ಅವರ ಪತ್ನಿ ಎಂಟು ತಿಂಗಳ ಗರ್ಭಿಣಿ. ಹೌದು ಗುರುನಾಥ್ ಅವರ ಪತ್ನಿ ಸೌಂದರ್ಯ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದು ಈಗಾಗಲೇ ಮೂರು ವರ್ಷದ ಒಂದು ಮಗು ಸಹ ಇವರಿಗೆ ಇದೆ. ಇನ್ನೇನು ತಮ್ಮ ಕುಟುಂಬಕ್ಕೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಗುರುನಾಥಮ್ ಅವರು ಇಡೀ ಕುಟುಂಬವನ್ನು ತ್ಯಜಿಸಿದ್ದಾರೆ. ಇನ್ನು ಸೌಂದರ್ಯ ತುಂಬು ಗರ್ಭಿಣಿ ಆಗಿದ್ದು ಪತಿಯನ್ನು ಇಂತಹ ಸಮಯದಲ್ಲಿ ಕಳೆದುಕೊಂಡು ತೀರಾ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.