ನವದೆಹಲಿ : ಸುಮಾರು 134 ವರ್ಷಗಳಿಂದ ರಾಜಕೀಯ ಮತ್ತು ಧಾರ್ಮಿಕ ವಿಚಾರವಾಗಿ ಬಹು ಸೂಕ್ಷ್ಮ ವಿವಾದವಾಗಿದ್ದ ಅಯೋಧ್ಯೆ ತೀರ್ಪು ಪ್ರಕಟವಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ ಎಸ್ ಎ ಬೊಬ್ಡೆ, ನ್ಯಾ ಡಿ ವೈ ಚಂದ್ರಚೂಡ್, ನ್ಯಾ ಅಶೋಕ್ ಭೂಷಣ್, ನ್ಯಾ. ಅಬ್ದುಲ್ ನಜೀರ್ ಅವರನ್ನು ಒಳಗೊಂಡಿದ್ದ ಪಂಚ ಸದಸ್ಯ ಪೀಠ ಐತಿಹಾಸಿಕ ತೀರ್ಪು ನೀಡಿದೆ.
ವಿವಾದಿತ 2.77 ಎಕರೆ ಜಾಗ ರಾಮ್ಲಲ್ಲಾಗೆ ಸೇರಿದ್ದು ಎಂದಿರುವ ಸುಪ್ರೀಂ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಿ ಎಂದು ಪೀಠ ಆದೇಶಿಸಿದೆ. ಅಲ್ಲದೆ ಮಂದಿರ ನಿರ್ಮಾಣದ ಹೊಣೆಯನ್ನು ಸರ್ಕಾರಕ್ಕೆ ನೀಡಿರುವ ಕೋರ್ಟ್ ನಿರ್ವಹಣೆ ಜವಬ್ದಾರಿಯನ್ನು ಟ್ರಸ್ಟ್ಗೆ ವಹಿಸಿದೆ. ಹಾಗೆಯೇ ಸುನ್ನಿವಕ್ಫ್ ಬೋರ್ಡ್ಗೆ ಅಯೋಧ್ಯೆಯಲ್ಲೇ ಪ್ರತ್ಯೇಕ 5 ಎಕರೆ ಜಾಗವನ್ನು ನೀಡಲು ಕೋರ್ಟ್ ಆದೇಶಿಸಿದೆ,
2019 ಆಗಸ್ಟ್ 6ರಿಂದ ಸಿಜೆಐ ರಂಜನ್ ಗೊಗೊಯ್ ನೇತೃತ್ವದಲ್ಲಿ 40 ದಿನಗಳ ವಿಚಾರಣೆ ನಡೆಸಿದ ಪಂಚ ಸದಸ್ಯ ಪೀಠ ಅಕ್ಟೋಬರ್ 16ರಂದು ವಿಚಾರಣೆ ಮುಗಿಸಿ ಅಂತಿಮ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿತ್ತು.
ಅಯೋಧ್ಯೆ ತೀರ್ಪು ಪ್ರಕಟ : ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣ
Date: