ಈ ಹಿಂದೆ ಹೆಲ್ಮೆಟ್ ಹಾಕದೇ ಇದ್ದರೆ ಭಾರೀ ದಂಡ ವಿಧಿಸುತ್ತೇವೆ, ಹೆಲ್ಮೆಟ್ ಇಲ್ಲದಿದ್ದರೆ ಗಾಡಿ ಚಲಾಯಿಸುವಂತಿಲ್ಲ, ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಸಹ ಸಿಗುವುದಿಲ್ಲ ಎಂಬ ಭಿನ್ನ ವಿಭಿನ್ನ ರೂಲ್ ಗಳನ್ನು ನೋಡಿದ್ದೆವು. ಆದರೆ ಇದೇ ಮೊದಲ ಬಾರಿಗೆ ಹೆಲ್ಮೆಟ್ ಧರಿಸಬೇಡಿ ಎಂದು ಪೊಲೀಸರೇ ಹೇಳುತ್ತಿರುವುದನ್ನು ನೋಡಿ ಜನ ಒಮ್ಮೆ ನಿಬ್ಬೆರಗಾಗಿ ಹೋಗಿದ್ದಾರೆ. ಹೌದು ಈ ರೀತಿ ಹೊಸ ನಿಯಮವನ್ನು ಜಾರಿಗೊಳಿಸಿರುವುದು ಹಾಸನ ಸಂಚಾರ ಪೊಲೀಸರು. ಹೌದು ಹಾಫ್ ಹೆಲ್ಮೆಟ್ ಅನ್ನು ಧರಿಸಿ ವಾಹನ ಚಲಾಯಿಸುತ್ತಿದ್ದ ಸವಾರರನ್ನು ತಡೆದು ಹೆಲ್ಮೆಟ್ ಅನ್ನು ಕಿತ್ತು ನೆಲಕ್ಕೆ ಬಿಸಾಕುತ್ತಿದ್ದಾರೆ ಹಾಸನ ಜಿಲ್ಲಾ ಸಂಚಾರಿ ಪೊಲೀಸರು.
ಪೊಲೀಸರು ಈ ರೀತಿ ಮಾಡುತ್ತಿರುವುದು ಯಾಕೆಂದರೆ ಜನರ ಸುರಕ್ಷತೆಯ ದೃಷ್ಟಿಯಿಂದ ಹೌದು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಕಾರಣಕ್ಕೆ ದಂಡದಿಂದ ತಪ್ಪಿಸಿಕೊಳ್ಳಲು ಅರ್ಧ ಹೆಲ್ಮೆಟ್ ಅನ್ನು ಖರೀದಿಸಿ ಧರಿಸಿ ವಾಹನ ಚಲಾಯಿಸುತ್ತಿದ್ದರ ಜನರು ಇದರಿಂದ ಅಪಘಾತವಾದಾಗ ಸುರಕ್ಷತೆ ಎಂಬುದು ಹೆಚ್ಚಾಗಿ ಇರುತ್ತಿರಲಿಲ್ಲ. ಅರ್ಧ ಹೆಲ್ಮೆಟ್ ಹಾಕಿ ಅಪಘಾತ ಸಂಭವಿಸಿದರೆ ತಲೆಗೆ ಆ ಹೆಲ್ಮೆಟ್ ಸುರಕ್ಷೆ ನೀಡುವುದಿಲ್ಲ ಬದಲಾಗಿ ಪೆಟ್ಟಾಗುತ್ತದೆ ಎಂಬ ಕಾರಣಕ್ಕೆ ಅರ್ಧ ಹೆಲ್ಮೆಟ್ ಧರಿಸಿದವರ ಹೆಲ್ಮೆಟ್ ಅನ್ನು ಕಿತ್ತು ಕಸಕ್ಕೆ ಎಸೆಯುತ್ತಿದ್ದಾರೆ. ಹಾಗೂ ಇದರ ಬದಲು ಫುಲ್ ಹೆಲ್ಮೆಟ್ ಅನ್ನು ಖರೀದಿಸಿ ಧರಿಸಿ ಎಂದು ಸಲಹೆಯನ್ನು ಪೊಲೀಸರು ನೀಡುತ್ತಿದ್ದು ಆದಷ್ಟು ಬೇಗ ಎಲ್ಲ ಕಡೆ ಫುಲ್ ಹೆಲ್ಮೆಟ್ ಧರಿಸಲೇಬೇಕು ಎಂಬ ರೂಲ್ ಕೂಡ ಬರಬಹುದು.