ಇತ್ತೀಚೆಗಷ್ಟೇ ನಡೆದ ಒಂದು ಸಂದರ್ಶನದಲ್ಲಿ ರಚಿತಾರಾಮ್ ಅವರು ಕನ್ನಡದ ಟ್ರೋಲ್ ಪೇಜ್ ಗಳ ವಿರುದ್ಧ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ನಿಮ್ಮ ಮನಸ್ಸಿಗೆ ಬಂದ ಹಾಗೆ ಟ್ರೋಲ್ ಮಾಡುವುದಲ್ಲ ನಮಗೂ ಸಹ ನೋವಾಗುತ್ತದೆ ಎಂದು ಯೋಚಿಸಿ ಎಂದು ಟ್ರೋಲ್ ಪೇಜ್ ಗಳ ವಿರುದ್ಧ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ರಚಿತಾರಾಮ್. ಅಷ್ಟೇ ಅಲ್ಲದೆ ರಶ್ಮಿಕಾ ಮಂದಣ್ಣ ಅವರ ಪರ ಸಹ ರಚಿತಾ ರಾಮ್ ಅವರು ಈ ಸಂದರ್ಶನದಲ್ಲಿ ಬ್ಯಾಟ್ ಬೀಸಿದ್ದಾರೆ.
ಇನ್ನು ರಚಿತಾ ರಾಮ್ ಅವರ ಈ ಹೇಳಿಕೆಗಳನ್ನು ಗಮನಿಸಿದ ಕನ್ನಡ ಸಿನಿ ಪ್ರೇಕ್ಷಕರು ಇಷ್ಟು ದಿನ ಇಲ್ಲದ ಟ್ರೋಲ್ ಪೇಜ್ ವಿರುದ್ಧದ ಹೇಳಿಕೆ ಈಗ್ಯಾಕೆ? ಇಷ್ಟು ದಿನ ಟ್ರೋಲ್ ಮಾಡಿದರು ಮಾತನಾಡುತ್ತಿರಲಿಲ್ಲ ಇದೀಗ ತೆಲುಗು ಚಿತ್ರವೊಂದರ ಆಫರ್ ಬಂದಿದೆ ಎಂಬ ಸುದ್ದಿ ಹರಿದಾಡಿದ ಕೂಡಲೇ ಕನ್ನಡ ಟ್ರೋಲ್ ಪೇಜ್ ಗಳ ವಿರುದ್ಧ ರಚಿತಾರಾಮ್ ಅವರು ದನಿ ಎತ್ತಿದ್ದಾರೆ ಎಂದು ಕನ್ನಡ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಕನ್ನಡ ಬರಲ್ಲ ಎಂದು ಹೇಳಿದ್ದ ರಶ್ಮಿಕಾ ಅವರ ಪರ ರಚಿತಾ ಮಾತನಾಡಿದ್ದಕ್ಕೆ ಸಹ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.