ಒಂದು ಗಂಡು, ಒಂದು ಹೆಣ್ಣಿನ ನಡುವೆ ಆಕರ್ಷಣೆ. ಇದು ಪ್ರಕೃತಿ ನಿಯಮವೂ ಹೌದು. ಆದರೆ, ಮೋಹ ಅತಿರೇಕತೆ ಎಂದಿಗೂ ಅಪಾಯ.
ಆತನ ಹೆಸರು ಶಿವಕುಮಾರ…ಆಕೆಯ ಹೆಸರು ವಿಜಯಲಕ್ಷ್ಮಿ …ಶಿವಕುಮಾರ್ ಉದ್ಯಮಿ. ವಿಜಯ ಲಕ್ಷ್ಮಿ ಏನ್ ಕೆಲಸ ಮಾಡ್ತಿದ್ದಳು ಎನ್ನುವುದು ಗೊತ್ತಿಲ್ಲ. ಆದರೆ ಟಿಕ್ ಟಾಕಲ್ಲಿ ಟಾಪ್! ಸಿನಿಮಾ ಹಾಡುಗಳ ಮೂಲಕ ಟಿಕ್ ಟಾಕಲ್ಲಿ ಬಹು ದೊಡ್ಡ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಸುರಸುಂದರಾಂಗಿ. ಅವಳ ಟಿಕ್ ಟಾಕ್ , ಅವಳ ಸೌಂದರ್ಯಕ್ಕೆ ಮಾರುಹೋದವರಲ್ಲಿ ಶಿವಕುಮಾರ್ ಒಬ್ಬ…ಬೇರೆ ಅವರು ಗೊತ್ತಿಲ್ಲ! ಶಿವಕುಮಾರ್ ಫಿದಾ ಆಗಿದ್ದಾನೆ. ಬಳಿಕ ವಿಜಯಲಕ್ಷ್ಮಿ , ಶಿವಕುಮಾರ್ ಫೇಸ್ ಬುಕ್ ಸ್ನೇಹಿತರಾಗಿದ್ದಾರೆ. ಅದಾದ ಮೇಲೆ ಪ್ರೀತಿ ಅರಳಿದೆ.
ವಿಜಯಲಕ್ಷ್ಮಿ ನಿಜವಾಗಿಯೂ ಪ್ರೀತಿಸಿದಂತಿಲ್ಲ. ಆದರೆ, ಶಿವಕುಮಾರ್ ಮಾತ್ರ ಹೃದಯದಲ್ಲಿ ತಾಜ್ ಮಹಲ್ ಕಟ್ಟಿದ್ದಾನೆ. ನಂತರ ಸ್ವಲ್ಪ ಸಮಯ ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ಇಬ್ಬರು ವಾಸ ಕೂಡ ಇದ್ದಾರೆ. ಈ ವೇಳೆ ವಿಜಯಲಕ್ಷ್ಮಿ ಲಕ್ಷ ಲಕ್ಷ ರೂ ಹಣವನ್ನು ಶಿವಕುಮಾರಿಂದ ಪಡೆದಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿದ್ದ ಆಕೆ,ಯಾವಾಗ ಶಿವಕುಮಾರ್ ಮದುವೆ ಪ್ರಸ್ತಾಪವಿಟ್ಟನೋ ನಿರಾಕರಿಸಿ ಮನೆ ಬಿಟ್ಟಿದ್ದಾಳೆ. ನಂತರ ಗೆಳೆಯ ಮಧು ಎಂಬಾತನ ಮೂಲಕ ಕೊಲೆ ಬೆದರಿಕೆ ಹಾಕಿಸಿದ್ದಾಳೆ. ನೋಡಿ ನೋಡಿ ಬೇಸತ್ತ ಶಿವಕುಮಾರ್ ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಟ್ಟಿನಲ್ಲಿ ಟಿಕ್ ಟಾಕ್ ಸ್ಟಾರ್ ಮೈಮಾಟಕ್ಕೆ ಮರಳಾಗಿ ಲಕ್ಷ ಲಕ್ಷ ಕಳೆದುಕೊಂಡಿದ್ದು ಮಾತ್ರವಲ್ಲದೆ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗಿದೆ.