ಕಳೆದ ವರ್ಷ ನೂರು ಕೋಟಿಯ ಒಡೆಯ ಎಂದೆನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ. ಇದೀಗ ನೂರು ಕೋಟಿ ಒಡೆಯನಲ್ಲ. ಇವರ ಆಸ್ತಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ನಾಮಪತ್ರ ಸಲ್ಲಿಸಿದ ವೇಳೆ ಬಹಿರಂಗವಾಗಿದೆ.
ಹೌದು, 2018ರ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಘೋಷಣೆ ಮಾಡಿಕೊಂಡಿದ್ದ ಆಸ್ತಿ 122.77 ಕೋಟಿ ರೂಪಾಯಿ. ಉಪ ಚುನಾವಣೆಗೆ ಅವರೇ ಘೋಷಣೆ ಮಾಡಿಕೊಂಡಂತೆ 90.50 ಕೋಟಿ ರೂಪಾಯಿ ಆಸ್ತಿ. ಕಳೆದ ವರ್ಷಕ್ಕಿಂತ ಈ ವರ್ಷ 32.27 ಕೋಟಿ ರೂಪಾಯಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ