ಬಿಜೆಪಿಯ ಹೊಸಕೋಟೆ ಅಭ್ಯರ್ಥಿಯಾಗಿರುವ ಎಂಟಿಬಿ ನಾಗರಾಜ್ ಅವರು ಇತ್ತೀಚಿನ ದಿವಸಗಳಲ್ಲಿ ವಿವಾದಾತ್ಮಕ ಹೇಳಿಕೆ ಮೂಲಕ ಮಾಧ್ಯಮದವರ ಕಣ್ಣಿಗೆ ಬಿದ್ದಿದ್ದಾರೆ ಹಾಗಾಗಿಯೇ ಅವರು ಎಲ್ಲೇ ಹೋದರೂ ಕೂಡ ಮಾಧ್ಯಮದವರು ಮೊದಲಿಗೆ ಕೇಳುವ ಪ್ರಶ್ನೆ ಅವರ ಹೇಳಿಕೆ ವಿಚಾರದಲ್ಲಿ ಇದರಿಂದ ಎಂಟಿಬಿ ನಾಗರಾಜ್ ಮನನೊಂದಿದ್ದಾರೆ ಎಂದು ಹೇಳಲಾಗುತ್ತಿದೆ .
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಇತರ ನಾಯಕರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ಎಂಟಿಬಿ ನಾಗರಾಜ್ ಇಂದು ಮಾಧ್ಯಮದವರ ಜೊತೆ ಮಾತನಾಡದೇ ನನ್ನನ್ನು ಏನೂ ಕೇಳಬೇಡಿ, ನಾನು ಏನೂ ಹೇಳುವುದಿಲ್ಲ ಎಂದು ಮಾಧ್ಯಮಗಳಿಗೆ ಕೈಮುಗಿದು ಹೊರಟು ಹೋಗಿದ್ದಾರೆ ಎನ್ನಲಾಗಿದೆ.