ಯಡಿಯೂರಪ್ಪ ಬಿಜೆಪಿ ಉಪಚುನಾವಣೆಯ ಪ್ರಚಾರದ ರಂಗಿಗೆ ಇಳಿದಿದ್ದಾರೆ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿಯ ಅಭ್ಯರ್ಥಿಯ ಪರ ಪ್ರಚಾರ ಮಾಡಲು ಮುಖ್ಯಮಂತ್ರಿಯವರು ಹೋಗುತ್ತಿದ್ದಾರೆ ಹಾಗೂ ಒಬ್ಬೊಬ್ಬರಿಗೆ ಒಂದೊಂದು ಉಸ್ತುವಾರಿಯನ್ನು ಕೂಡ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಅರವಿಂದ ಲಿಂಬಾವಳಿ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ನೇತೃತ್ವದಲ್ಲಿ ಕಾರ್ಯತಂತ್ರ ಹೆಣೆಯಲಾಗಿದೆ.ಲಿಂಬಾವಳಿಗೆ 8 ಕ್ಷೇತ್ರ, ಅರುಣ್‍ಕುಮಾರ್ 7 ಕ್ಷೇತ್ರಗಳ ಹೊಣೆಗಾರಿಕೆ ನೀಡಲಾಗಿದ್ದು, ಎಲ್ಲೆಲ್ಲಿ ಭಿನ್ನಮತ, ಅಸಮಾಧಾನವಿದೆಯೋ ಅಂತಹ ಕಡೆ ಮನವೊಲಿಸುವುದು, ಬೇರೆ ಬೇರೆ ಕಾರಣಗಳಿಗೆ ಮುನಿಸಿಕೊಂಡಿರುವ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಹೊಸಕೋಟೆ, ಗೋಕಾಕ್, ವಿಜಯನಗರ, ರಾಣೆಬೆನ್ನೂರು ಸೇರಿದಂತೆ ಮತ್ತಿತರ ಕಡೆ ಸಣ್ಣಪುಟ್ಟ ಗೊಂದಲಗಳ ಕಾರಣ ಫಲಿತಾಂಶದ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ಬಿಜೆಪಿ ಎಲ್ಲರ ಮನವೊಲಿಸುವ ಕಸರತ್ತು ನಡೆಸಿದ್ದಾರೆ. ಇನ್ನು ಪ್ರತಿ ಕ್ಷೇತ್ರದಲ್ಲಿ ಪಕ್ಷದ ಎಲ್ಲ ಹಂತದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ತೀರ್ಮಾನಿಸಿದೆ.