ಮೈಸೂರಿನಲ್ಲಿ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡ ಅವರು ಯಡಿಯೂರಪ್ಪ ಎಷ್ಟು ದುಡ್ಡು ಸಾಗಿಸಿದರೂ ಯಾರು ಕೇಳಲ್ಲ. ಅದಕ್ಕೆ 15ಕ್ಕೆ 15 ಗೆಲ್ಲುತ್ತೇನೆ ಅಂತಿದ್ದಾರೆ ಎಂದು ಆರೋಪಿಸಿದರು. ಬ ಯಡಿಯೂರಪ್ಪ ಬಳಿ ಸರ್ಕಾರ ಇದೆ. ಗುಪ್ತವಾರ್ತೆ ಇದೆ. ಎಲ್ಲೆಲ್ಲಿ ಹಿಂದೆ ಬಿದ್ದಿದ್ದೀರ ಅಂತ ಗುಪ್ತವಾರ್ತೆ ತಕ್ಷಣವೇ ಹೇಳುತ್ತಿದೆ. ಆರ್ಥಿಕವಾಗಿ ಶಕ್ತಿಯಿದೆ. ಅವರು ಎಷ್ಟೇ ಹಣ ಸಾಗಿಸಿದರೂ ಯಾರು ಕೇಳೋರಿಲ್ಲ.
ಎಲ್ಲ ಅನರ್ಹ ಅಭ್ಯರ್ಥಿಗಳಿಗೆ ಎಷ್ಟು ಹಣ ಬೇಕೋ ಕೇಳಿ ಎಂದಿದ್ದಾರೆ. ಎಲ್ಲ ಕಡೆ ಮಂತ್ರಿಗಳನ್ನು ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬನ್ನಿ ಎಂದಿದ್ದಾರೆ. ಮಂತ್ರಿಗಳಿಗೂ ಹಣ ಬೇಕಿದ್ದರೆ ಅಲ್ಲಿಂದಲೇ ಫೋನ್ ಮಾಡಿ ನಾನು ಕಳಿಸುತ್ತೇನೆ ಎಂದಿದ್ದಾರೆ. ಇಷ್ಟೆಲ್ಲಾ ಇರಬೇಕಾದರೆ ನಾವೇನು ಮಾಡೋಕಾಗುತ್ತೆ. ಬಿಎಸ್ ಯಡಿಯೂರಪ್ಪ ದುಡ್ಡಿನಿಂದ ಚುನಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.