ಮಾಜಿ ಪ್ರಧಾನಿ ದೇವೇಗೌಡ ಅವರು ಉಪ ಚುನಾವಣೆ ಪ್ರಚಾರವನ್ನು ಭರ್ಜರಿಯಾಗಿ ಮಾಡ್ತಾ ಇದ್ದಾರೆ ಹಾಗೂ ಬಿಜೆಪಿಯ ವಿರುದ್ಧ ಹೇಳಿಕೆಗಳನ್ನು ಕೊಟ್ಟುಕೊಂಡು ಬರ್ತಾ ಇದ್ದಾರೆ ಇದೀಗ ಅವರು ಆಪರೇಷನ್ ಕಮಲದ ಮೂಲಕ ಕುದುರೆ ವ್ಯಾಪಾರ ಮಾಡಿದ್ದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಹತ್ತರ ಸಾಧನೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಗೋಕಾಕ್ ಕ್ಷೇತ್ರದ ಅಶೋಕ್ ಪೂಜಾರಿ ಅವರ ಪರ ಪ್ರಚಾರಕ್ಕೆ ಎಂದು ಬಂದಿದ್ದ ದೇವೇಗೌಡ ಅವರು ಅಶೋಕ್ ಪೂಜಾರಿ ಅವರಿಗೆ ಮತ ಹಾಕುವ ಮೂಲಕ ಇಲ್ಲಿನ ಜನತೆ ಜೆಡಿಎಸ್ ಪಕ್ಷಕ್ಕೆ ಬಲ ನೀಡಬೇಕು ಎಂದು ದೇವೇಗೌಡ ಇದೇ ವೇಳೆ ಮತದಾರರಲ್ಲಿ ಮನವಿ ಮಾಡಿದರು