ಸದಸ್ಯೆ ಸುಮಲತಾ ಅಂಬರೀಶ್ ಉಪ ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರಕ್ಕೆ ಬಂದಿಲ್ಲ. ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿತ್ತು.
ಅವರು ಯಾರಿಗೂ ಬೆಂಬಲ ನೀಡದೇ ತಟಸ್ಥರಾಗಿರುವುದಾಗಿ ತಿಳಿಸಿದ್ದು, ಮತದಾನಕ್ಕೆ ಮೊದಲು ಸಂದೇಶ ರವಾನಿಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಮಾಧ್ಯಮ ಮತ್ತಿತರ ಕಡೆಗಳಲ್ಲಿ ನಾನು ಉಪ ಚುನಾವಣೆಯಲ್ಲಿ ಯಾರಿಗೆ ಬೆಂಬಲ ಸೂಚಿಸುತ್ತೇನೆ ಎಂಬ ಚರ್ಚೆಗಳು ನಡೆಯುತ್ತಿವೆ ನನ್ನ ಪ್ರಕಾರ ಮಂಡ್ಯ ಜಿಲ್ಲೆಯ ಮತದಾರರು ಅತ್ಯಂತ ಸೂಕ್ಷ್ಮಮತಿಗಳು ಮತ್ತು ಬುದ್ಧಿವಂತರಾಗಿದ್ದು, ಉತ್ತಮ ಅಭ್ಯರ್ಥಿ ಯಾರು ಎಂದು ತಿಳಿದುಕೊಂಡಿದ್ದಾರೆ. ಅದನ್ನು ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಬರವಸೆ ನನಗಿದೆ ಎಂದಿದ್ದಾರೆ ಎನ್ನಲಾಗುತ್ತಿದೆ.