ರೈತರೊಬ್ಬರು ಸಾಲಹೆಚ್ಚಗಿದ್ದಕೆ ತನ್ನ ಬೆಳೆ ಪಲಕೊಡದೆ ಇದ್ದ ಕಾರಣ ದೇವೇಗೌಡ ಅವರು ಮೃತ ಪಟ್ಟಿದ್ದಾರೆ. ದೇವೇಗೌಡ ಅವರು ಟ್ರಾಕ್ಟರ್ ಕೊಳ್ಳಲು ಕೊಟಕ್ ಮಹೀಂದ್ರಾ ಫೈನಾನ್ಸ್ ಕಂಪನಿಯಿಂದ 5 ಲಕ್ಷ ರೂ.ಸಾಲ ಹಾಗೂ ಕೃಷಿ ಚಟುವಟಿಕೆಗೆ ಸುಮಾರು 5 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನಲಾಗಿದೆ.
ಕೊಳವೆ ಬಾವಿಗಳು ನೀರಿಲ್ಲದೇ ಬತ್ತಿಹೋಗಿ ಬಾಳೆ, ಕಬ್ಬು ಮತ್ತು ಭತ್ತದ ಬೆಳೆಗಳು ಒಣಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದರಿಂದ ಮನನೊಂದು ತನ್ನ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.