ಕೇರಳದ ಸೂಪರ್ ಸ್ಟಾರ್ ದಿಲೀಪ್ ಅವರ ಮೊದಲ ಪತ್ನಿಯಾಗಿರುವ ಮಂಜು ವಾರಿಯರ್, ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಅವರಿಗೆ ನೀಡಿರುವ ದೂರಿನಲ್ಲಿ, ಮೆನನ್ ತನ್ನನ್ನು ದೂಷಿಸುತ್ತಿದ್ದು ಅದರಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದ್ದರು. ಈ ಸಂಬಂಧಿಸಿದ ಸಾಕ್ಷಿ ಕೂಡ ನೀಡಿದ್ದರು. ಈ ಪ್ರಕರಣದ ಪ್ರಾಥಮಿಕ ತನಿಖೆಗೆ ವಿಶೇಷ ಘಟಕಕ್ಕೆ ನ್ಯಾಯಾಲಯ ಸೂಚಿಸಿದೆ.
ಗುರುವಾರ ರಾತ್ರಿ ಪೋಲಿಸರು ಮೆನನ್ ಅವರನ್ನು ಬಂಧಿಸಲಾಗಿದ್ದು, ಇಬ್ಬರು ವ್ಯಕ್ತಿಗಳು ನೀಡಿದ ಜಾಮೀನಿನ ಮೇಲೆ ನಂತರ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೆನನ್ ತಾನು ಮಾಡಿದ ಒಳ್ಳೆಯದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮೆನನ್ ಹೇಳಿದ್ದಾರೆ.